ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಿಲಂಬಮ್ ಸ್ಪರ್ದೆ: ಪದಕಗಳ ಕೊಳ್ಳೆ ಹೊಡೆದ ಕೊಪ್ಪಳ ಜಿಲ್ಲೆ ಸ್ಪರ್ಧಿಗಳು

05:41 PM Dec 16, 2024 IST | Samyukta Karnataka

" ಸಮಗ್ರ ಪ್ರಶಸ್ತಿ" ಬಾಚಿದ ಬಾಲಕ - ಬಾಲಕಿಯರ ತಂಡಗಳು

ಕೋಲಾರ: ಪದವೀ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಕೋಲಾರ ಜಿಲ್ಲೆ ಮತ್ತು ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಪದವೀ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಸಿದ್ದ ರಾಜ್ಯಮಟ್ಟದ ಸಿಲಂಬಮ್ ಸ್ಪರ್ದೆ ಯಶಸ್ವಿಯಾಗಿ ನೆರವೇರಿತು.
ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಚೊಕ್ಕಹಳ್ಳಿ ಪದವೀ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿಲಂಬಮ್ (ದೊಣ್ಣೆ/ಕೋಲು ವರಸೆ) ಸ್ಪರ್ದೆಯಲ್ಲಿ ರಾಜ್ಯದ ೮ ಜಿಲ್ಲೆಗಳಿಂದ (ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಧಾರವಾಡ, ಮೈಸೂರು, ಬೀದರ್, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಕೊಪ್ಪಳ) ಬಾಲಕರು ಹಾಗೂ ಬಾಲಕಿಯರು ತಲಾ ೮ ಮಂದಿಯAತೆ ೧೨೦ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
ತೀವ್ರ ಸೆಣಸಾಟ, ಹಣಾಹಣಿ, ಅತ್ಯುತ್ಸಾಹ, ಚಾಕಚಕ್ಯತೆಯಲ್ಲಿ ನಡೆದ ಈ ದೊಣ್ಣೆ ವರಸೆಯಲ್ಲಿ ಅತಿಹೆಚ್ಚು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಬಾಲಕರು ಹಾಗೂ ಬಾಲಕಿಯರ ಎರಡೂ ವಿಭಾಗವು ಪ್ರತ್ಯೇಕವಾಗಿ ಸಮಗ್ರ ಪ್ರಶಸ್ತಿಗಳನ್ನು ತಮ್ಮ ಮುಡಿಲಿಗೇರಿಸಿಕೊಂಡವು.
ತೀವ್ರ ಪ್ರತಿಸ್ಪರ್ಧೆ ಒಡ್ಡಿ ೨ನೇ ಸ್ಥಾನ ಪಡೆದ ಬಾಲಕರ ವಿಭಾಗದಲ್ಲಿ ಧಾರವಾಡ ಹಾಗೂ ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಗಳು ರನ್ನರ್ ಆಫ್ ಪ್ರಶಸ್ತಿಗಳನ್ನು ಪಡೆದವು, ಈ ನಾಲ್ಕು ತಂಡಗಳಿಗೆ ಟ್ರೋಪಿಗಳು, ಪದಕಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ಸಮಾರೋಪ ಸಮಾರಂಭದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪದವೀ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಶೋಕ್‌ಕುಮಾರ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು, ಖಜಾಂಚಿ ನಾರಾಯಣಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ರತ್ನಪ್ಪ, ಚಿನ್ಮಯ ಪದವೀ ಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಸಿ.ಮಂಜುನಾಥ್, ಮಂಜುಳ, ಪರಶುರಾಮ್, ಪಾಟೀಲ್, ಉಪನ್ಯಾಸಕರಾದ ಅರುಣ್ ಕುಮಾರ್, ಕಾರ್ತಿಕ್, ಮೂರ್ತಿ, ಎನ್.ಕೆ.ಮಂಜುನಾಥ್, ಗೊಡರೆಡ್ಡಿ, ಶಂಕರ್, ನಾರಾಯಣಸ್ವಾಮಿ, ರಮೇಶ್, ಪದವೀ ಪೂರ್ವ ಶಿಕ್ಷಣ ಇಲಾಖೆಯ ಗ್ರಂಥಪಾಲಕ ಡಿ.ಎಸ್.ಶ್ರೀನಾಥ್, ಶಾಖಾಧಿಕಾರಿ ಆರ್.ರಾಧಮ್ಮ, ಪ್ರಥಮ ದರ್ಜೆ ಸಹಾಯಕರಾದ ಕೆ.ಮುನಿಲಕ್ಷಿö್ಮÃ, ವಿನೋಧ, ಮತ್ತಿತರರು ಭಾಗವಹಿಸಿದ್ದರು.

Tags :
#ಕೋಲಾರ
Next Article