For the best experience, open
https://m.samyuktakarnataka.in
on your mobile browser.

ಸಿ.ಟಿ.ರವಿ ಪ್ರಕರಣ: ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

03:47 PM Dec 20, 2024 IST | Samyukta Karnataka
ಸಿ ಟಿ ರವಿ ಪ್ರಕರಣ  ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾವಣೆ: 24 ಗಂಟೆಯೊಳಗೆ ಬೆಂಗಳೂರಿನ ಕೋರ್ಟ್ ಹಾಜರು ಪಡಿಸಲು ಸೂಚನೆ

ಬೆಳಗಾವಿ: ಸಿ.ಟಿ ರವಿ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸಂವಿಧಾನಿಕ ಪದಬಳಕೆ ಆರೋಪ ಪ್ರಕರಣದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿ 5ನೇ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀರಾದ ಸ್ಪರ್ಶಾ ಡಿಸೋಜಾ ಅವರು ಆದೇಶಿಸಿದ್ದಾರೆ. ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಬೆಳಗಾವಿ ಕೋರ್ಟ್​, ಅನುಮತಿ ನೀಡಿದ್ದು, ಎಷ್ಟು ಸಮಯಬೇಕು ಎಂದು ಕೇಳಿದೆ. ಇದಕ್ಕೆ ಪೊಲೀಸರು, ವಿಮಾನದಲ್ಲಿ ಮೂಲಕ ಹೋಗುವುದಾರೆ 2 ಗಂಟೆ, ಬೈ ರಸ್ತೆ ಮೂಲಕ ಹೋಗುವುದಾರೆ 12 ಗಂಟೆ ಬೇಕು ಎಂದು ಕೋರ್ಟ್​ಗೆ ಸ್ಪಷ್ಟಪಡಿಸಿದ್ದರು, 24 ಗಂಟೆಯೊಳಗೆ ಬೆಂಗಳೂರಿನ ಕೋರ್ಟ್ ಹಾಜರು ಪಡಿಸಲು ಸೂಚನೆ ನೀಡಿದ್ದು. ಸಿಟಿ ರವಿ ಅವರನ್ನ ಪೊಲೀಸರು ಬೆಳಗಾವಿಯಿಂದ ಬೆಂಗಳೂರಿನತ್ತ ಕರೆದುಕೊಂಡು ಹೊಗುತ್ತಿದ್ದಾರೆ.

Tags :