For the best experience, open
https://m.samyuktakarnataka.in
on your mobile browser.

ಸಿ.ಟಿ ರವಿ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾತದ ನಿರ್ಧಾರಕ್ಕೆ ಕೇಂದ್ರ ಸಚಿವ ಜೋಶಿ ಗರಂ

05:11 PM Jan 12, 2025 IST | Samyukta Karnataka
ಸಿ ಟಿ ರವಿ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾತದ ನಿರ್ಧಾರಕ್ಕೆ ಕೇಂದ್ರ ಸಚಿವ ಜೋಶಿ ಗರಂ

ಹುಬ್ಬಳ್ಳಿ: ಸದನದ ಸಭಾಂಗಣದಲ್ಲಿ ನಡೆದ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಸರ್ಕಾರವೇ ಶಾಸಕಾಂಗದ ಮೇಲೆ ಸವಾರಿ ಮಾಡುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಭಾಪತಿ ಮತ್ತು ಸರಕಾರದ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಬೆಳೆಸುವುದು ಸರಕಾರಕ್ಕೆ ಶೋಭೆ ತರುವಂತದಲ್ಲ. ಬಸವರಾಜ ಹೊರಟ್ಟಿಯವರು ಪರಿಷತ್‌ನಲ್ಲಿ ೪೫ ವರ್ಷ ಸದಸ್ಯರಾಗಿದ್ದವರು. ಹೊರಟ್ಟಿಯವರಿಗೆ ಸಾಕಷ್ಟು ಅನುಭವವಿದೆ. ಸಭಾಪತಿಯಾಗಿ ಅವರು ರೂಲಿಂಗ್ ಕೊಟ್ಟಿದ್ದಾರೆ. ಸಲಹೆ ಸೂಚನೆ ಕೊಟ್ಟಿದ್ದಾರೆ. ಸರಕಾರ ಅದನ್ನು ಪಾಲನೆ ಮಾಡುವುದು ಒಳ್ಳೆಯದು ಎಂದರು.
ಭಾರತದ ಸಂವಿಧಾನದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಎಲ್ಲದಕ್ಕೂ ಮಿತಿ ಇದೆ. ಯಾರು ಆ ರೇಖೆಯನ್ನು ಕ್ರಾಸ್ ಮಾಡಬಾರದು. ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಇಲ್ಲಿಗೆ ಮುಕ್ತಾಯ ಮಾಡುವುದು ಒಳ್ಳೆಯದು ಎಂದು ಸಚಿವ ಜೋಶಿ ಸಲಹೆ ನೀಡಿದರು.
ಬಿಜೆಪಿಯವರು ಸಭಾಪತಿ ಕಚೇರಿ ಕಂಟ್ರೋಲ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆ ನೋಡಿದರೆ, ಅವರಿಗೆ ಬುದ್ದಿ ಭ್ರಮಣೆಯಾಗಿದೆ. ಹೊರಟ್ಟಿಯವರು ನುರಿತವರಾಗಿದ್ದಾರೆ. ಈ ಕಾಂಗ್ರೆಸ್‌ನವರು ಮಾಡುವ ಈ ಆರೋಪ ಬಿಜೆಪಿಗೆ ಮಾಡಿದಂತೆ ಆಗುವುದಿಲ್ಲ; ಬದಲಾಗಿ ಸಭಾಪತಿ ಅವರ ಮೇಲೆ ಮಾಡಿದಂತಾಗುತ್ತದೆ ಎಂದು ಹೇಳಿದರು.