For the best experience, open
https://m.samyuktakarnataka.in
on your mobile browser.

ಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಜಾಗೃತಿ

07:14 PM Jan 08, 2024 IST | Samyukta Karnataka
ಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಜಾಗೃತಿ

ಕುಷ್ಟಗಿ: ಹೆಣ್ಣು ತಾಯಿಯಾಗಿ ಬೇಕು.ಮಡದಿಯಾಗಿ ಬೇಕು.ಆದರೆ,ಹುಟ್ಟುವ ಮೊದಲೇ ಹೆಣ್ಣಾಗಲಿ,ಗಂಡಾಗಲಿ ಏಕೆ ಬೇಡ ಇದು ಸಮಾಜದಲ್ಲಿ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.ಹೆಣ್ಣು ಶಿಶು ಹುಟ್ಟುವ ಮೊದಲೇ ಭ್ರೂಣ ಹತ್ಯೆ ಮಾಡುವ ಕೆಲಸ ಅಕ್ಷಮ್ಯ ಮಹಾ ಅಪರಾಧವಾಗಿದ್ದು ಹೀಗಾಗಿ ಯಾರು ಕೂಡ ಭ್ರೂಣ ಹತ್ಯೆ ಪೂರ್ಣ ಹತ್ತೆ ಮಾಡದಂತೆ ಸೀಮಂತ ಕಾರ್ಯಕ್ರಮದಲ್ಲಿ ಜಾಗೃತಿ ಫಲಕ ಹಿಡಿದುಕೊಂಡು ಜಾಗೃತಿ ಮೂಡಿಸುವ ಕಾರ್ಯ ನಿಜಕ್ಕೂ ಒಳ್ಳೆಯ ವಿಷಯವಾಗಿದೆ.
ತಾಲೂಕಿನ ಕಡೇಕೊಪ್ಪ ಗ್ರಾಮದ ನಿಂಗಪ್ಪ ಜಿಗೇರಿ,ರೇಖಾ ಜಿಗೇರಿ ದಂಪತಿಗಳ ಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಜಾಗೃತಿ ಮೂಡಿಸಿರುವುದು ಗಮನಾರ್ಹ ಎನಿಸಿದೆ. ಸೀಮಂತ ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಸಹ ಹೆಣ್ಣು ಭ್ರೂಣ ಹತ್ಯೆ ಮಹಾ ಅಪರಾಧ ಭ್ರೂಣ ಹತ್ಯೆ ನಿಲ್ಲಿಸಬೇಕು.
ರಾಜ್ಯದಲ್ಲಿ ನಡೆಯುತ್ತಿವೆ ಎನ್ನಲಾದ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷವಾದ ನೀತಿಯೊಂದನ್ನು ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ನವದಂಪತಿಗಳು ಅರಿವು ಮೂಡಿಸಿದರು ಭ್ರೂಣ ಹತ್ಯೆ ನಿಲ್ಲಿಸಿ ಎಂದು ಫಲಕ ಪ್ರದರ್ಶಿಸಿದರು.