ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸೀರೆ ಉತ್ಪಾದನೆಯಲ್ಲಿ ದಿಢೀರ್ ಕುಸಿತ: ಗೋದಾಮು ಸೇರುತ್ತಿರುವ ಸೀರೆಗಳು

05:10 PM Jan 20, 2025 IST | Samyukta Karnataka

ನೇಯ್ಗೆಯಿಲ್ಲದೆ ನೇಕಾರರು ವೇತನಕ್ಕಾಗಿ ಪರದಾಟ

ಉತ್ತರ ಕರ್ನಾಟಕದ ಮ್ಯಾಂಚೇಸ್ಟರ್’ ಖ್ಯಾತಿಯ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ಪಟ್ಟಣಕ್ಕೆ ಇದೀಗ ಜವಳಿ ಕ್ಷೇತ್ರದಿಂದ ದೂರ ಉಳಿಯುವ ಆತಂಕದ ಸ್ಥಿತಿ ಎದುರಿಸುತ್ತಿದ್ದು, ನೇಕಾರರ ಪರಿಸ್ಥಿತಿಯಂತು ದಿನದಿಂದ ದಿನಕ್ಕೆ ದಯನೀಯವಾಗಿದೆ. ಕಳೆದೊಂದು ದಶಕದಿಂದ ತೀವ್ರ ಹದಗೆಟ್ಟಿರುವ ಸೀರೆ ಉತ್ಪಾದನೆ ಕ್ರಿಯೆ ಕೋವಿಡ್ ನಂತರದ ದಿನಗಳಿಂದಂತು ಹೇಳತೀರದು. ಒಂದು ಕಾಲದಲ್ಲಿ 30 ರಿಂದ 35 ಸಾವಿರದಷ್ಟು ಮಗ್ಗಗದಿನಕ್ಕೆ ಳನ್ನು ಹೊಂದಿದ್ದ ಪಟ್ಟಣ ಇದೀಗ 7500 ಮಗ್ಗಗಳಿಗೆ ಸೀಮಿತಗೊಂಡಿದ್ದು, 40 ಸಾವಿರದಷ್ಟು ಸೀರೆ ಉತ್ಪಾದನೆ ಮಾಡುತ್ತಿದ್ದ ಪ್ರದೇಶ ಇದೀಗ ಕೇವಲ 10 ಸಾವಿರಕ್ಕೆ ಸೀಮಿತಗೊಂಡಿದೆ.ಈಗಷ್ಟೇಬಿಗ್ ಬಾರ್ಡರ್’(ಆನೆ ನಕ್ಷೆ) ಸೀರೆ ಮಾರುಕಟ್ಟೆ ಸಂಪೂರ್ಣ ನಿರ್ನಾಮಗೊಂಡಿದ್ದು, ಇದೀಗ ಮಗ್ಗಗಳೂ ಸಹಿತ ಗುಜರಿಗೆ ಸೇರುವಲ್ಲಿ ಕಾರಣವಾಗಿದೆ.

ವಿನ್ಯಾಸ ವೈಫಲ್ಯ: ಸೀರೆ ಉತ್ಪಾದನೆಯಲ್ಲಿ ಏಳೆಂಟು ವರ್ಷಗಳಿಗೊಮ್ಮೆಯಾದರೂ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದ ರಬಕವಿ-ಬನಹಟ್ಟಿ ಕಾಟನ್ ಸೀರೆ ಇದೀಗ ಕಳೆದೆರಡು ದಶಕಗಳಿಂದ ಅಷ್ಟೊಂದು ಪ್ರಮಾಣದಲ್ಲಿ ಬೇಡಿಕೆಯಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಹೊಸ ನೈಪುಣ್ಯತೆ ಹೊಂದಿದ ವಿನ್ಯಾಸಗಳಿಂದ ಸೀರೆ ಉತ್ಪಾದನೆಯಾಗದಿರುವದು ಕಾರಣವಾಗಿದೆ.

ಸಾಮಗ್ರಿ ಬೆಲೆ ಗಗನಕ್ಕೆ: ಉತ್ಪಾದನೆಗೆ ಬೇಕಾಗುವ ಕಚ್ಛಾ ಸಾಮಗ್ರಿ ಸೇರಿದಂತೆ ಮಜೂರಿ ದರ ಸುಮಾರು 30 ರಿಂದ 35 ರಷ್ಟು ಹೆಚ್ಚಳಗೊಂಡಿದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಸೀರೆಗಳಿಗೆ ಬೆಲೆ ದೊರಕುತ್ತಿಲ್ಲ. ಇದರೊಂದಿಗೆ ಸರ್ಕಾರದ ಜಿಎಸ್‌ಟಿ ತೆರಿಗೆ ನೇಕಾರಿಕೆಗೆ ಹೊರೆಯಾಗುವಲ್ಲಿ ಕಾರಣವಾಗಿದೆ.

ಗೋದಾಮು ಸೇರುತ್ತಿರುವ ಸೀರೆ: ಮಾರುಕಟ್ಟೆಯಿಲ್ಲದ ಕಾರಣ ದಿನಂಪ್ರತಿ ನೇಯ್ಗೆಯಾಗುತ್ತಿರುವ ಸೀರೆಗಳು ಗೋದಾಮು ಸೇರುತ್ತಿವೆ. ಮತ್ತೊಂದೆಡೆ ನೇಕಾರರಿಗೆ ಆರಕ್ಕೆ 8-10 ಸೀರೆಗಳನ್ನು ಮಾತ್ರ ಉತ್ಪಾದನೆಗೆ ಅವಕಾಶ ನೀಡುತ್ತಿದ್ದು, ಮಾರುಕಟ್ಟೆಯ ವೈಫಲ್ಯ ಅರಿವಾಗುವಲ್ಲಿ ಕಾರಣ.

ಕಲೆ ವೈಫಲ್ಯ: ಸಾಂಪ್ರದಾಯಕ ಮಾರುಕಟ್ಟೆ ನಗರಗಳಾಗಿ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿನ ಕೆಲ ಮಹಾನಗರ ಬಿಟ್ಟರೆ ಇತರೆ ರಾಜ್ಯಗಳಲ್ಲಿ ಈ ಸೀರೆ ಮಾರುಕಟ್ಟೆ ಅಷ್ಟಕಷ್ಟೆಯಾಗಿದೆ. ಈ ಮಾರುಕಟ್ಟೆ ಕಲೆ ಹಾಗು ಸ್ಪಂದನೆಯ ವೈಫಲ್ಯವೂ ಮಾರಾಟಕ್ಕೆ ಮತ್ತೊಂದು ಕಾರಣವಾಗಿದೆ.

ನೇಕಾರರ ವೈಫಲ್ಯ: ರೆಪಿಯರ್, ಕಂಪ್ಯುಟರ್ ಜಕಾರ್ಡ್ ಸೇರಿದಂತೆ ವಿನೂತನ ಮಗ್ಗಗಳು ನಗರಕ್ಕೆ ಕಾಲಿರಿಸಿವೆ. ಇವುಗಳ ನೈಪುಣ್ಯತೆ ಹೊಂದಿದ ನೇಕಾರರಿಲ್ಲದ ಕಾರಣ ಆಧುನಿಕತೆಗೆ ಹೊಂದಿಕೊಳ್ಳುವಲ್ಲಿ ನೇಕಾರರು ಸಂಪೂರ್ಣ ವೈಫಲ್ಯಗೊಂಡಿದ್ದಾರೆ.

ಮಾರಕವಾದ ಅಸಂಘಟಿತ: ನೇಕಾರ ಸಮುದಾಯದಲ್ಲಿ ಕಾರ್ಮಿಕ, ಉತ್ಪಾದನೆ ಹಾಗು ಮಾರಾಟ ಸೇರಿದಂತೆ ಯಾವದೇ ವಿಭಾಗಗಳಲ್ಲಿ ಸಂಘಟನೆಯಿಲ್ಲದ ಕಾರಣ ಅಸಂಘಟಿತ ವಲಯದಲ್ಲಿ ಮುನ್ನಡೆಯುತ್ತಿದ್ದಾರೆ. ಯಾವದೇ ಸಮಾಲೋಚನೆ, ಚರ್ಚೆಯಿಲ್ಲದ ಕಾರಣ ಜವಳಿ ಅವನತಿಗೂ ಪ್ರಮುಖ ಕಾರಣವೆನ್ನಲಾಗಿದೆ.

ಇವೆಲ್ಲದಕ್ಕೂ ಮದ್ದು ಎನ್ನುವಂತೆ ಜನಪ್ರತಿನಿಧಿಗಳ ಹಸ್ತಕ್ಷೇಪ ಮುಖ್ಯವಾಗಿದ್ದು, ಧ್ವನಿಯಿಲ್ಲದ ನೇಕಾರ ಸಮುದಾಯಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಅನಿವಾರ್ಯತೆಯಿದ್ದು, ಯಾವ ರೀತಿ ಮುಂದಿನ ದಿನಗಳು ನೇಕಾರರದ್ದಾಗಿವೆ ಎಂಬುದನ್ನು ಕಾದು ನೋಡಬೇಕು.

Tags :
#ಬಾಗಲಕೋಟೆ#ರಬಕವಿ-ಬನಹಟ್ಟಿ#ಸೀರೆ
Next Article