ಸುಚನಾಗೆ ಆರು ದಿನ ಪೊಲೀಸ್ ಕಸ್ಟಡಿ
ಪಣಜಿ: ನಾಲ್ಕು ವರ್ಷದ ಮಗನನ್ನು ಕೊಂದು ಬಂಧಿತಳಾದ ಸುಚನಾ ಸೇಠ್ಳನ್ನು ಮ್ಹಾಪ್ಸಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಕೆಯನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ ಸುಚನಾಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಾಲ್ಸನ್ ತಿಳಿಸಿದ್ದಾರೆ. ಆಕೆ ತನಗೆ ಕಡಿಮೆ ಶಿಕ್ಷೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದಳು. ಘಟನೆಯ ಬಗ್ಗೆ ಏನಾದರೂ ಹೇಳಲು ಬಯಸುತ್ತೀರಾ ಎಂದು ನ್ಯಾಯಾಲಯವು ಆಕೆಯನ್ನು ಕೇಳಿತು. `ಪೊಲೀಸರು ನೇರವಾಗಿ ಕರೆ ತಂದಿದ್ದಾರೆ. ಮೊದಲು ವಕೀಲರೊಂದಿಗೆ ಮಾತನಾಡುತ್ತೇನೆ, ನಂತರ ನನ್ನನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ' ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.
ಇದು ಗಂಭೀರ ಅಪರಾಧವಾಗಿದೆ ಮತ್ತು ಸಂವಿಧಾನದ ಅಡಿಯಲ್ಲಿ ಇನ್ನೂ ಅನೇಕ ಮೌಖಿಕ ನೋಂದಣಿಗಳನ್ನು ಮಾಡಬೇಕಾಗಿದೆ. ಕೊಲೆ ಆರೋಪಿಯ ನಿಜವಾದ ಉದ್ದೇಶವನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಪೊಲೀಸರು ಕಸ್ಟಡಿ ಕೋರಿದರು. ತಕ್ಷಣ ಆಕೆಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಲಯ ಆದೇಶಿಸಿತು.
ಕೋರ್ಟಿಗೆ ಹಾಜರುಪಡಿಸಿದ ಸಂದರ್ಭದಲ್ಲಿ ಸುಚನಾ ಕೈಗೆ ಬ್ಯಾಂಡೇಜ್ ಕಂಡುಬಂತು.