For the best experience, open
https://m.samyuktakarnataka.in
on your mobile browser.

ಸುಧಾರಣೆ, ಸಾಧನೆ, ಪರಿವರ್ತನೆಯ ಮಂತ್ರದೊಂದಿಗೆ ಭಾರತವು ವಿಕಾಸದೆಡೆಗೆ

01:54 PM Dec 09, 2024 IST | Samyukta Karnataka
ಸುಧಾರಣೆ  ಸಾಧನೆ  ಪರಿವರ್ತನೆಯ ಮಂತ್ರದೊಂದಿಗೆ ಭಾರತವು ವಿಕಾಸದೆಡೆಗೆ

ಜೈಪುರ: ಇದು ತಂತ್ರಜ್ಞಾನ ಹಾಗೂ ದತ್ತಾಂಶ ಚಾಲಿತ ಶತಮಾನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ತಾನದ ಜೈಪುರದಲ್ಲಿಂದು "ರೈಸಿಂಗ್ ರಾಜಸ್ಥಾನ ಗ್ಲೋಬಲ್ ಶೃಂಗಸಭೆ 2024" ಅನ್ನು ಉದ್ಘಾಟಿಸಿ ಮಾತನಾಡಿದ ಅವರು ಇದು ತಂತ್ರಜ್ಞಾನ ಹಾಗೂ ದತ್ತಾಂಶ ಚಾಲಿತ ಶತಮಾನವಾಗಿದ್ದು, ಭಾರತವು ಪ್ರಜಾಪ್ರಭುತ್ವ, ಜನಸಂಖ್ಯಾ ಸ್ವರೂಪ ಹಾಗೂ ದತ್ತಾಂಶದ ನೈಜ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸುತ್ತಿದೆ, ಡಿಜಿಟಲ್‌ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ ಎಲ್ಲಾ ರಂಗಗಳಿಗೆ ಹೇಗೆ ಪ್ರಯೋಜನ ಕಲ್ಪಿಸಬಹುದು ಎಂಬುದನ್ನು ಭಾರತ ತೋರಿಸಿದೆ. ಭಾರತದ ಯುಪಿಐ, ಡಿಬಿಟಿ ಯೋಜನೆಗಳು ಮತ್ತು ಇಂತಹ ಅನೇಕ ಸೌಲಭ್ಯಗಳು ಡಿಜಿಟಲ್‌ ಮೂಲಸೌಕರ್ಯದ ಶಕ್ತಿಯನ್ನು ಅನಾವರಣಗೊಳಿಸಿವೆ, ಭಾರತವು ಕಳೆದ 10 ವರ್ಷಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿ ಮುನ್ನಡೆದಿದೆ. ವಿಶ್ವದ ಪ್ರತಿಯೊಬ್ಬ ಹೂಡಿಕೆದಾರ ಇಂದು ಭಾರತದ ಬಗ್ಗೆ ಬಹಳ ಉತ್ಸಾಹದಲ್ಲಿದ್ದಾರೆ. ಭಾರತದಲ್ಲಿ ಆರ್ಥಿಕತೆಯ ಸ್ಥಿರತೆ, ರಫ್ತು ಪ್ರಮಾಣದಲ್ಲಿ ದುಪ್ಪಟ್ಟು ಹೆಚ್ಚಳವಾಗಿದೆ. ಪ್ರತಿಯೊಬ್ಬ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಸುಧಾರಣೆ, ಸಾಧನೆ, ಪರಿವರ್ತನೆ ಎಂಬ ಮಂತ್ರವನ್ನು ಅನುಸರಿಸಿ ಭಾರತವು ವಿಕಾಸದೆಡೆಗೆ ಮುನ್ನಡೆದಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಗೋಚರಿಸುತ್ತದೆ. ಭಾರತ ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ, ಭಾರತವು 11 ನೇ ಆರ್ಥಿಕತೆಯಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಕ್ಕೆ ಏರಿದೆ ಎಂದರು.

Tags :