ಸುಪ್ರೀಂ ಕೋರ್ಟ್‌ನಿಂದ ಯತ್ನಾಳ್‌ಗೆ ಸಿಹಿ ಸುದ್ದಿ
ಸುಪ್ರೀಂ ಕೋರ್ಟ್, ಅನುಮತಿ ನೀಡಿದ್ದು, ವಾರದಲ್ಲಿಯೇ ಸಂಪೂರ್ಣ ಕಾರ್ಯಾರಂಭ
ಬೆಳಗಾವಿ: ಸುಪ್ರೀಂ ಕೋರ್ಟ್ ಆದೇಶ ಸತ್ಯಕ್ಕೆ ಸಿಕ್ಕ ಜಯವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪುಣ್ಯ ಪವಿತ್ರ ಸಮಾಧಿ ಸ್ಥಳ ಬೆಳಗಾವಿಯ ನಂದಗಡಕ್ಕೆ ಇಂದು ಭೇಟಿ ನೀಡಿ, ಭಕ್ತಿಪೂರ್ವಕ ನಮನ ಸಲ್ಲಿಸಿ, ಆಶೀರ್ವಾದ ಪಡೆದುಕೊಳ್ಳುವ ಸಮಯದಲ್ಲಿಯೇ, ನಮ್ಮ ಚಿಂಚೋಳಿ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕಕ್ಕೆ ಕಬ್ಬು ನುರಿಸಲು 7 ದಿನಗಳಲ್ಲಿ ಅನುಮತಿ ನೀಡಬೇಕೆಂದು ಮಾನ್ಯ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಶುಭ ಸುದ್ದಿ ಬಂದಿದ್ದು, ಸಂಗೊಳ್ಳಿ ರಾಯಣ್ಣನವರ ಪವಾಡ ಶಕ್ತಿಯ ಆಶೀರ್ವಾದವೇ ಸಾಕ್ಷಿಯಾಯಿತು.
ಹಾಲುಮತದ ಮಹತ್ವ, ಪವಾಡ ಶಕ್ತಿ-ಭಕ್ತಿ ಎಂತಹದ್ದು, ಎಂಬುವುದಕ್ಕೆ ಇಂದಿನ ಸಿಹಿ ಸುದ್ದಿಯೇ ಸಾಬಿತಾಯಿತು. ರಾಜಕೀಯ ದುರುದ್ದೇಶದಿಂದ ಮಾನ್ಯ ಸುಪ್ರೀಂ ಕೋರ್ಟ್ ದಲ್ಲಿ ಕೇಸ ದಾಖಲಿಸಿ, ಸಾವಿರಾರು ರೈತರಿಗೆ, ಕಾರ್ಮಿಕರಿಗೆ ಅನ್ಯಾಯ ಮಾಡಿದ್ದರು.
ಇದೀಗ ಮಾನ್ಯ ಸುಪ್ರೀಂ ಕೋರ್ಟ್, ಅನುಮತಿ ನೀಡಲು ಆದೇಶಿಸಿದ್ದು, ವಾರದಲ್ಲಿಯೇ ಸಂಪೂರ್ಣ ಕಾರ್ಯಾರಂಭ ಮಾಡಲಾಗುತ್ತಿದ್ದು, ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಕುತಂತ್ರ ನಡೆಸಿದವರ ದುರುದ್ದೇಶ ನೆಲಕಚ್ಚಿದೆ ಎಂದಿದ್ದಾರೆ.