For the best experience, open
https://m.samyuktakarnataka.in
on your mobile browser.

ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ನೋಬೆಲ್ ಕೊಡಬೇಕು

06:51 PM Feb 19, 2024 IST | Samyukta Karnataka
ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ನೋಬೆಲ್ ಕೊಡಬೇಕು

ದಾವಣಗೆರೆ: ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯರಿಗೆ ಸುಳ್ಳು ಹೇಳುವುದರಲ್ಲಿ ನೋಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ರಾಮ ಮಂದಿರ ಉದ್ಘಾಟನೆಗೆ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದ ನಾಯಕರನ್ನು ಆಹ್ವಾನ ಮಾಡಿಲ್ಲ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ಜಾತಿ ಆಧಾರದಲ್ಲಿ ಆಹ್ವಾನಿಸಿಲ್ಲ. ಹಿಂದು ಧರ್ಮದ ಆಧಾರದಲ್ಲಿ ಆಹ್ವಾನಿಸಲಾಗಿದೆ ಎಂದರು.

ಶ್ರೀ ಮಾದಾರ ಚನ್ನಯ್ಯ, ಕಾಗಿನೆಲೆ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ರಾಮಮಂದಿರದ ಉದ್ಘಾಟನೆಗೆ ಸೇರಿಸಿದ್ದರು. ಮುಂದುವರೆದವರು, ಹಿಂದುಳಿದವರು, ದಲಿತರು ಎಂದು ಪ್ರತ್ಯೇಕಿಸಿ ಆಹ್ವಾನಿಸಿಲ್ಲ. ಹಿಂದೂ ಸ್ವಾಮೀಜಿಗಳು ಎಂದು ಕರೆಯಲಾಗಿತ್ತು ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್ ನವರು ನೂರು ಬಾರಿ ಸುಳ್ಳು ಹೇಳಿ ಅದನ್ನೇ ನಿಜ ಮಾಡಲು ಹೋಗುತ್ತಾರೆ ಎಂದು ಕುಟುಕಿದರು.

ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಾಕಾರಣಿ ಸಭೆ ನಡೆಯಿತು. ಈ ಅಧಿವೇಶನ ಮುಂದಿನ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಪಡೆಯಬೇಕು ಎನ್ನುವುದು ಚರ್ಚೆ ಆಯ್ತು. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ಮನೆ ಮನೆಗೆ ತೆರಳಿ ಕೆಲಸ ಮಾಡಬೇಕ ಎಂದು ಚರ್ಚಿಸಲಾಯಿತು. ನಾಳೆ ರಾಮ್ ಮೋಹನ್ ಅಗರವಾಲ್ ಬೆಂಗಳೂರಿಗೆ ಆಗಮಿಸಲಿದ್ದು, ಸಭೆ ನಡೆಸಲಿದ್ದಾರೆ. ಜನರು ಕೂಡ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಿಶ್ಚಯ ಮಾಡಿದ್ದಾರೆ ಎಂದರು.

ಜಿನ್ನಾ ಸಂಸ್ಕೃತಿಯಲ್ಲಿ ದೇಶ ಒಡೆಯುವರನ್ನ ಗುಂಡಿಟ್ಟು‌ಕೊಲ್ಲಬೇಕು ಎಂದು ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದ ವಿವಾದಾತ್ಮಕ ಹೇಳಿಯನ್ನು ಸಮರ್ಥಿಸಿಕೊಂಡ ಕೆ.ಎಸ್ ಈಶ್ವರಪ್ಪ, ನನ್ನ ಹೇಳಿಕೆಯನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಇದಕ್ಕೆ ಕೋರ್ಟ್ ನಲ್ಲಿ ಕೂಡ ಎಫ್ ಐ ಆರ್ ಗೆ ಸ್ಟೇ ಕೂಡ ತಂದಿದೆ. ಡಿಕೆಶಿ ಅವರಿಗೆ ಈಗಾಗಲೇ ಎರಡು ಸೆಟಲ್ಮೆಂಟ್ ಆಗಿದೆ‌. ಈಗ ಒಮ್ಮೆ ಜೈಲಿಗೆ ಹೋಗಿ ಬಂದಿದ್ದಾರೆ ಇನ್ನೊಮ್ಮೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ಕೆ.ಇ ಕಾಂತೇಶ್, ಜಿಲ್ಲಾ ವಕ್ತಾರಾದ ಡಿ.ಎಸ್ ಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐರಾಣಿ ಅಣ್ಣೇಶ್, ಅನಿಲ್ ಕುಮಾರ್ ನಾಯಕ್, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಎಲ್.ಎನ್ ಕಲ್ಲೇಶ್, ಕೊಳನಹಳ್ಳಿ ಸತೀಶ್, ಕೆ.ಬಿ ಕೊಟ್ರೇಶ್, ಗುರುನಾಥ್, ಲಿಂಗರಾಜ, ಎಚ್.ಎಸ್ ಕೃಷ್ಣಮೂರ್ತಿ ಪವರ್ ಉಪಸ್ಥಿತರಿದ್ದರು.