For the best experience, open
https://m.samyuktakarnataka.in
on your mobile browser.

ಸೂಪರ್ ಫಾಸ್ಟ್ ರೈಲು ಪುನರಾರಂಭ

07:05 PM Nov 26, 2023 IST | Samyukta Karnataka
ಸೂಪರ್ ಫಾಸ್ಟ್ ರೈಲು ಪುನರಾರಂಭ

ಹುಬ್ಬಳ್ಳಿ: ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ವಿಶೇಷ ರೈಲು ಸಂಚಾರ ನ.೩೦ರಿಂದ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಕಡಿಮೆ ಪ್ರಯಾಣಿಕರ ಕೊರತೆ ಕಾರಣ ಓಡಾಟ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಆಡಳಿತ ತಿಳಿಸಿದ ನಂತರ ಈ ಭಾಗದ ಪ್ರಯಾಣಿಕರಿಗೆ ಆಗುವ ಅನಾನುಕೂಲತೆ ಹಾಗೂ ಜನರ ಆಗ್ರಹದ ಕಾರಣದಿಂದ ಸಚಿವ ಜೋಶಿಯವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ನೈರುತ್ಯ ರೈಲ್ವೆ ಮಹಾ ಪ್ರಭಂದಕ ಸಂಜೀವ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ರೈಲು ಓಡಾಟದ ಪುನರಾರಂಭದ ಅಗತ್ಯತೆಯನ್ನು ಮನಗಾಣಿಸಿದ ಫಲವಾಗಿ ನೈರುತ್ಯ ರೈಲ್ವೆ ಆಡಳಿತ ಈ ರೈಲು ಸೇವೆಯನ್ನು ನ. ೩೦ರಿಂದ ಫೆ. ೨೯ರವರೆಗೆ ಮುಂದುವರೆಸಿ ಆದೇಶ ಹೊರಡಿಸಿದೆ.