For the best experience, open
https://m.samyuktakarnataka.in
on your mobile browser.

ಸೂರ್ಯನ ತಾಪಕ್ಕೆ ೫೦ ಬಲಿ

11:16 PM May 31, 2024 IST | Samyukta Karnataka
ಸೂರ್ಯನ ತಾಪಕ್ಕೆ ೫೦ ಬಲಿ

ನವದೆಹಲಿ: ದೇಶಾದ್ಯಂತ ದಿನದಿಂದ ದಿನಕ್ಕೆ ಸೂರ್ಯನ ತಾಪ ಹೆಚ್ಚುತ್ತಲೇ ಇದೆ. ಉತ್ತರಭಾರತದಲ್ಲಿ ಬಿಸಿಲಿನ ಹೊಡೆತಕ್ಕೆ ಜನರು ತಲ್ಲಣಗೊಂಡಿದ್ದು, ಈವರೆಗೆ ೫೦ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ಪೈಕಿ ಬಿಹಾರದಲ್ಲಿ ೧೯ ಮತ್ತು ಒಡಿಶಾದಲ್ಲಿ ೧೨ ಜನರು ಜೀವ ತೆತ್ತಿದ್ದಾರೆ.
ಗರಿಷ್ಠ ಉಷ್ಣಾಂಶ: ನಾಗಪುರದಲ್ಲಿ ನಾಲ್ಕು ಉಷ್ಣಾಂಶ ದಾಖಲು ಕೇಂದ್ರಗಳಲ್ಲಿ ೫೪ ಡಿಗ್ರಿ ಮತ್ತೊಂದರಲ್ಲಿ ೫೬ ಡಿಗ್ರಿ ತೋರಿಸಿದೆ. ಅಚ್ಚರಿಯೆಂದರೆ ಉಳಿದ ಕೇಂದ್ರಗಳಲ್ಲಿ ೪೪ ಡಿಗ್ರಿ ಉಷ್ಣಾಂಶ ದಾಖಲಾಗಿದೆ.
೩೬ ಗಂಟೆಯಲ್ಲಿ ೩೦ಕ್ಕೂ ಹೆಚ್ಚು ಸಾವು: ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ತೀವ್ರವಾದ ಬಿಸಿಲು, ಬಿಸಿಗಾಳಿಗೆ ಜನಜೀವನ ತತ್ತರಿಸಿದೆ. ಒಡಿಶಾದ ರೂರ್ಕೆಲಾ ಆಸ್ಪತ್ರೆಯಲ್ಲಿ ೧೨ ಜನರು ಕೊನೆಯುಸಿರೆಳೆದಿದ್ದಾರೆ ಈ ರಾಜ್ಯಗಳಲ್ಲಿ ೪೪ ರಿಂದ ೪೭ ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲೆಯ ಉಷ್ಣಾಂಶ ದಾಖಲಾಗಿದೆ.
ವಿವಿಧ ರಾಜ್ಯಗಳಲ್ಲಿ ಸತ್ತವರ ಸಂಖ್ಯೆ: ಬಿಹಾರ ( ೩೨ ), ಒಡಿಶಾ (೧೨), ಜಾರ್ಖಂಡ್ ಮತ್ತು ರಾಜಸ್ಥಾನ ತಲಾ ೫, ಉತ್ತರಪ್ರದೇಶ ಮತ್ತು ದೆಹಲಿ ತಲಾ ಒಂದು.