ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಸಂಪನ್ನ

11:13 PM Feb 22, 2024 IST | Samyukta Karnataka

ಶಿರಸಿ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯೆನ್ನುವಂತೆ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ೫೫ನೇ ಯತಿಗಳಾಗಿ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿಯವರು ಗುರುವಾರ ಶುಭ ಮುಹೂರ್ತದಲ್ಲಿ ಸನ್ಯಾಸಗ್ರಹಣ ಮಾಡಿದರು.
ಶಿಷ್ಯ ಪರಿಗ್ರಹಣದ ಈ ಅಭೂತಪೂರ್ವ ಸಮಾರಂಭದಲ್ಲಿ ಪ್ರಸ್ತುತ ಪೀಠಾಧಿಪತಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ತಮ್ಮ ಉತ್ತರಾಧಿಕಾರಿ ನೂತನ ಶ್ರೀಗಳಿಗೆ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಎಂದು ಶುಭನಾಮಕರಣ ಮಾಡಿ ಆಶೀರ್ವದಿಸಿದರು. ಶಿಷ್ಯ ಸ್ವೀಕಾರ ಮಹೋತ್ಸವದ ಅದ್ಭುತ ಕ್ಷಣಕ್ಕೆ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ಯಲ್ಲಾಪುರ ಈರಾಪುರದ ಗಂಗೆಮನೆಯ ವೇ.ನಾಗರಾಜ ಭಟ್ಟ ಅವರು ಈಗ ಶ್ರೀಮಠಕ್ಕೆ ೫೫ನೇ ಪೀಠಾಧಿಪತಿಗಳಾದರು. ಶಾಲ್ಮಲಾ ನದಿಯ ತೀರದಲ್ಲಿ ಸನ್ಯಾಸ ಹಾಗೂ ಶಿಷ್ಯ ಸ್ವೀಕಾರ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳನ್ನು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ನಾಡಿ ಪ್ರಖ್ಯಾತ ಋತ್ವಿಜರುಗಳ ನೇತೃತ್ವದಲ್ಲಿ ನೆರವೇರಿಸಿದರು. ಸನ್ಯಾಸ ಹಾಗೂ ಶಿಷ್ಯ ಸ್ವೀಕಾರದ ಪರಂಪರೆಯ ಆಚರಣೆಯಂತೆ ಕಾಷಾಯ ವಸ್ತç, ಮರದ ಆವುಗೆ(ಪಾದುಕೆ), ದಂಡ, ಕಮಂಡಲಗಳನ್ನು ಹಿರಿಯ ಶ್ರೀಗಳಿಂದ ಸ್ವೀಕರಿಸಿ ಧರಿಸಿದ ವೇ.ನಾಗರಾಜ ಭಟ್ಟ ಅವರು ಶ್ರೀಗಳೊಡನೆ ಹೆಜ್ಜೆ ಹಾಕುತ್ತ ಪಾದಯಾತ್ರೆಯ ಮೂಲಕ ಸಹಸ್ರಾರು ಶಿಷ್ಯ ಭಕ್ತರ ಜೊತೆಗೆ ಸ್ವರ್ಣವಲ್ಲೀ ರಥಬೀದಿಯಲ್ಲಿ ಸಾಗಿ ಸುವರ್ಣ ಘಳಿಗೆಯಲ್ಲಿ ಶ್ರೀಮಠ ಪ್ರವೇಶಿಸಿದರು.
ಮೈಸೂರು ಕೃಷ್ಣರಾಜನಗರ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಯಡತೊರೆ, ಹರಿಹರಪುರ ಶ್ರೀ ಆದಿ ಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀನರಸಿಂಹ ಪೀಠಂನ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು, ಬೆಂಗಳೂರು ಚಾಮರಾಜ ಪೇಟೆ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಪೀಠಾಧಿಪತಿ ಶ್ರೀ ವಿಧ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮಿಗಳವರು ಸೇರಿದಂತೆ ಅನೇಕ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ನಡೆಸಿದರು.
ಸ್ವರ್ಣವಲ್ಲೀ ಶ್ರೀಗಳನ್ನು ಹಾಗೂ ನೂತನ ಶ್ರೀಗಳನ್ನು ಶಾಲ್ಮಲಾ ನದಿಯ ತೀರದಿಂದ ಮಠದವರೆಗೆ ಪೂರ್ಣಕುಂಭ ಹಿಡಿದ ಮಾತೆಯರು, ಡೋಲು ವಾದ್ಯ, ಪಂಚವಾದ್ಯ, ಛತ್ರ ಚಾಮರದ ಭವ್ಯ ಮೆರವಣಿಗೆಯಲ್ಲಿ ಶ್ರೀಮಠದ ಶಿಷ್ಯ ಭಕ್ತರು ಮೆರವಣಿಗೆಯಲ್ಲಿ ಕರೆದೊಯ್ದರು.
ಮೆರವಣಿಗೆಯುದ್ದಕ್ಕೂ ಮಾರ್ಗದಲ್ಲಿ ಬಣ್ಣಬಣ್ಣದ ಆಕರ್ಷಕ ರಂಗವಲ್ಲಿ ಬಿಡಿಸಿ, ಪುಷ್ಪವೃಷ್ಟಿ ನಡೆಸಿ, ಪುಷ್ಪ ಹಾಸಿನ ಮೇಲೆ ಹಿರಿಯ ಹಾಗೂ ಕಿರಿಯ ಶ್ರೀದ್ವಯರನ್ನು ಸಂತಸ, ಸಂಭ್ರಮದಿಂದ ಬರಮಾಡಿಕೊಂಡರು.

Next Article