ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ಪಿನ್ನರ್ ಶೈನ್ ಆಗುವ ಸಾಧ್ಯತೆ

12:30 AM Feb 02, 2024 IST | Samyukta Karnataka

ವಿಶಾಖಪಟ್ಟಣ: ಆತಿಥೇಯ ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಫೆ ೨ ರಂದು ಶುಕ್ರವಾರ ಇಲ್ಲಿನ ಡಾ. ವೈ.ಎಸ್.ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಹೈದ್ರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ೧೯೦ ರನ್ ಹಿನ್ನಡೆ ಅನುಭವಿಸಿದರೂ ಕೂಡ ಪಂದ್ಯದಲ್ಲಿ ೨೮ ರನ್ ರೋಚಕ ಜಯ ಸಾಧಿಸಿದ ಪ್ರವಾಸಿ ಇಂಗ್ಲೆAಡ್, ಐದು ಪಂದ್ಯಗಳ ಸರಣಿಯಲ್ಲಿ ೧-೦ ರ ಮುನ್ನಡೆ ಸಾಧಿಸಿದೆ.
ಸ್ಪಿನ್ನರ್ ಮೇಲುಗೈ ಸಾಧ್ಯತೆ
ಹೈದ್ರಾಬಾದ್‌ನ ಪಿಚ್‌ನಂತೆ ವಿಶಾಖಪಟ್ಟಣದ ಪಿಚ್ ಕೂಡ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿರುವುದೆಂದು ಹೇಳಲಾಗುತ್ತಿದ್ದು, ಉಭಯ ತಂಡಗಳು ವೇಗಕ್ಕಿಂತ ಸ್ಪಿನ್‌ಗೆ ಆಧ್ಯತೆ ನೀಡುವುದು ಖಚಿತ.
ಗಾಯಳು ಸಮಸ್ಯೆ
ಭಾರತ ತಂಡ ಗಾಯಳು ಸಮಸ್ಯೆ ಎದುರಿಸುತ್ತಿದೆ. ವೈಯಕ್ತಿಕ ಕಾರಣದಿಂದ ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್‌ಗಳಿಂದ ಹೊರಗುಳಿದಿದ್ದು, ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಗಾಯಗೊಂಡಿದ್ದಾರೆ.
ಜೊತೆಗೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್‌ರಾದ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಸಂರ್ಪೂವಾಗಿ ಫಾರ್ಮ್ಗೆ ಮರಳಿಲ್ಲ. ಅಲ್ಲದೇ ನಾಯಕ ರೋಹಿತ್ ಶರ್ಮಾ ಅವರಿಂದ ಕೂಡ ದೊಡ್ಡ ಮೊತ್ತ ಬರದಿರುವುದು ತಂಡದ ಆಡಳಿತ ಮಂಡಳಿಯನ್ನು ಚಿಂತೆಗೀಡು ಮಾಡಿದೆ. ಗಾಯಾಳು ರವೀಂದ್ರ ಜಡೇಜಾ ಮತ್ತು ಕೆ.ಎಲ್.ರಾಹುಲ್ ಅವರ ಬದಲು ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳ ಹೊಳೆ ಹರಿಸಿದ ಸರ್ಫರಾಜ್ ಖಾನ್ ಮತ್ತು ರಜತ್ ಪಾಟಿದಾರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಮಹತ್ವದ ಟೆಸ್ಟ್ನಲ್ಲಿ ಈ ಇಬ್ಬರು ಹೊಸಬರಿಗೆ ಹನ್ನೊಂದು ಆಟಗಾರರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ.
ಶುಭಮನ್ ಗಿಲ್ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ತಡಬಡಿಸುತ್ತಿದ್ದು, ಅವರ ಸ್ಥಾನದಲ್ಲಿ ದ ಸರ್ಫರಾಜ್ ಖಾನ್ ಇಲ್ಲವೇ ರಜತ್ ಪಾಟಿದಾರ್ ಅವರನ್ನು ಆಡಿಸುವುದು ಹೆಚ್ಚುಕಡಿಮೆ ಖಚಿತ. ವಿಶಾಖಪಟ್ಟಣ ಪಿಚ್ ತಿರುವು ಕಾಣುವ ನಿರೀಕ್ಷೆಯಿದ್ದು, ಸ್ಪಿನ್ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸುವ ಶ್ರೇಯಸ್ ಅಯ್ಯರ್ ೩ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆಗಳಿವೆ. ನಾಲ್ಕನೇ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಇಲ್ಲವೇ ರಜತ್ ಪಾಟಿದಾರ್ ಅವರನ್ನು ಆಡಿಸುವ ಸಾಧ್ಯತೆಗಳಿವೆ.
ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸುವ ಸಾಧ್ಯತೆಗಳೇ ಅಧಿಕ.
ಶೋಯೆಬ್ ಬಶೀರ್‌ಗೆ ಸ್ಥಾನ
ಇನ್ನು ಪ್ರವಾಸಿ ಇಂಗ್ಲೆಂಡ್ ತಂಡದ ಬಗ್ಗೆ ಹೇಳುವುದದರೆ, ವೀಸಾ ಸಮಸ್ಯೆಯಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದರಿಂದ ವಂಚಿತರಾಗಿದ್ದ ಆಫ್-ಸ್ಪಿನ್ನರ್ ಶೋಯೆಬ್ ಬಶೀರ್ ಅವರು ಎರಡನೇ ಟೆಸ್ಟ್ ಆಡಲು ಸಜ್ಜಾಗಿದ್ದಾರೆ.
ಗಾಯದ ಸಮಸ್ಯೆ ಎದುರಿಸುತ್ತಿರುವ ಜ್ಯಾಕ್ ಲೀಚ್ ಅವರ ಬದಲು ಶೋಯೆಬ್ ಬಶೀರ್ ಸ್ಥಾನ ಪಡೆದಿದ್ದು, ಕಳೆದ ಎರಡು ದಿನಗಳಿಂದ ಕಠಿಣ ಅಭ್ಯಾಸ ನಡೆಸಿದ್ದಾರೆ. ಎರಡನೇ ಟೆಸ್ಟ್‌ಗೆ ಮಾರ್ಕ್ ವುಡ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಅನುಭವಿ ಬೌಲರ್ ಜೇಮ್ಸ್ ಆ್ಯಂಡರ್ಸನ್, ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ವೇಗದ ಬೌಲರ್.
ಭಾರತದ ಸಂಭಾವ್ಯ ೧೧ರ ಬಳಗ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್/ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.
ಇಂಗ್ಲೆಂಡ್ ಹನ್ನೊಂದರ ಬಳಗ: ಜಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆ್ಯಂಡರ್ಸನ್.
ಪಂದ್ಯದ ಆರಂಭ: ಮುಂಜಾನೆ ೯-೩೦

Next Article