For the best experience, open
https://m.samyuktakarnataka.in
on your mobile browser.

ಹಣ ಫಲಾನುಭವಿಗಳಿಗೆ ತಲುಪುವವರೆಗೂ ನಿರಂತರ ಹೋರಾಟ

11:44 AM Oct 10, 2024 IST | Samyukta Karnataka
ಹಣ ಫಲಾನುಭವಿಗಳಿಗೆ ತಲುಪುವವರೆಗೂ ನಿರಂತರ ಹೋರಾಟ

ಬೆಂಗಳೂರು: ನಿಗಮದ ಹಣ ಸರ್ಕಾರದ ಬೊಕ್ಕಸ ಸೇರಿ ಫಲಾನುಭವಿಗಳಿಗೆ ತಲುಪುವವರೆಗೂ ಕರ್ನಾಟಕ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ದೇಶದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಒಂದಾದ ಆರ್ಥಿಕ ಅಪರಾಧಗಳನ್ನು ತನಿಖೆ ಮಾಡುವ ಕೇಂದ್ರದ ಜಾರಿ ನಿರ್ದೇಶನಾಲಯವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ (ED) ಆರೋಪಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಲೂಟಿಯ ಸೂತ್ರಧಾರಿ ಮಾಜಿ ಸಚಿವ ಬಿ.ನಾಗೇಂದ್ರ, ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಎಂ.ಡಿ ಸತ್ಯ ನಾರಾಯಣ್, ಅಧ್ಯಕ್ಷ ಇಟಕಾರಿ ಸತ್ಯನಾರಾಯಣ, ನಿಗಮದ ಎಂ.ಡಿ.ಜೆಜಿ ಪದ್ಮನಾಭ ಸೇರಿದಂತೆ ಅಪರಾಧಿಗಳ ಮುಖವಾಡ ಬಯಲಾಗಿದೆ.
ಇತಿಹಾಸದಲ್ಲಿ ಕಂಡು ಕೇಳರಿಯದ ಸರ್ಕಾರಿ ಖಾತೆಗಳಿಗೆ ಖನ್ನ ಹಾಕಿದ ಹಗರಣ ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್‌ ಆಡಳಿತದ ಮೇಲುಸ್ತುವಾರಿಯಲ್ಲೇ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. 'ಬೇಲಿಯೇ ಎದ್ದು ಹೊಲ ಮೇಯ್ದ' ಉದಾಹರಣೆ ಉಲ್ಲೇಖಿಸಲು ಭವಿಷ್ಯತ್ತಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮೊದಲನೆಯ ಸ್ಥಾನದಲ್ಲಿ ನಿಲ್ಲಲಿದೆ, ಸದ್ಯ ಇಡಿ ಪಾರದರ್ಶಕವಾಗಿ ತನಿಖೆ ನಡೆಸಿ ಕಾಂಗ್ರೆಸ್ ಸರ್ಕಾರದ ಸಚಿವರೇ ಭಾಗಿಯಾಗಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ದುರ್ಮಾರ್ಗಗಳಿಂದ ಗಳಿಸಿದ ಕಪ್ಪು ಹಣದಿಂದ ಚುನಾವಣೆ ಜಯಿಸುತ್ತಿದ್ದ ಕಾಂಗ್ರೆಸ್ ಇದೀಗ ಸರ್ಕಾರಿ ಖಾತೆಯಿಂದ ಲೂಟಿಯಾದ ಹಣದಿಂದಲೂ ಚುನಾವಣೆ ನಿರ್ವಹಿಸಿರುವುದು ಲಜ್ಜೆಗೇಡಿತನ ಎಂದರೆ ತಪ್ಪಾಗಲಾರದು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಲೂಟಿಕೋರತನದ ಹಣವನ್ನು ಮತ್ತೆ ಸರ್ಕಾರದ ಬೊಕ್ಕಸ ಸೇರಿ ಪರಿಶಿಷ್ಟ ವರ್ಗಗಳ ಫಲಾನುಭವಿಗಳಿಗೆ ತಲುಪುವವರೆಗೂ ಕರ್ನಾಟಕ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದಿದ್ದಾರೆ

Tags :