ಹಲಾಲ್ ಮುಕ್ತ ಗಣೇಶ ಹಬ್ಬ ಆಚರಣೆಗೆ ಮುತಾಲಿಕ್ ಕರೆ
ಗಣೇಶ್ ಹಬ್ಬದ ಪ್ರಯುಕ್ತ ಮತ್ತೆ ಮುನ್ನೆಲೆಗೆ ಬಂದ ಹಲಾಲ್ ವಿಚಾರ. ಗೋವು ಭಕ್ಷಕರಿಂದ ಗಣೇಶ ಮೂರ್ತಿ ಖರೀದಿಸಿದಂತೆ ಪ್ರಮೋದ್ ಮುತಾಲಿಕ್ ಕರೆ.
ಬೆಳಗಾವಿ: ಗೋ ಭಕ್ಷಕರಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿರುವ ಅವರು ಗೋ ಭಕ್ಷಕರಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಡಿ, ಹಲಾಲ್ ಮಾಡಿದ ವಸ್ತುಗಳನ್ನು ತೆಗೆದುಕೊಳ್ಳಬೇಡಿ, ಅಪವಿತ್ರವಾದ ವಸ್ತು ಖರೀದಿ ಮಾಡಿದರೆ ಅಪಚಾರವಾಗುತ್ತದೆ. ಶಾಸ್ತ್ರ ಬದ್ದವಾದ ಮಣ್ಣಿನ ಗಣಪತಿಯ ಮೂರ್ತಿಯನ್ನೇ ಪೂಜೆ ಮಾಡಬೇಕು ಹೊರತು POP ಗಣಪತಿ ಶಾಸ್ತ್ರಕ್ಕೆ ಯೋಗ್ಯವಾದುದ್ದಲ್ಲ, ಅಪವಿತ್ರವಾದ್ದದು. ಗಣಪತಿಯ ಮೆರವಣಿಗೆಗಳಲ್ಲಿ, ಮಂಟಪಗಳಲ್ಲಿ ಅಶ್ಲೀಲ ಗೀತೆಗಳನ್ನು, ಚಲನಚಿತ್ರ ಗೀತೆಗಳನ್ನು ಹಾಕುವಂತಿಲ್ಲ. ಕೇವಲ ಭಕ್ತಿ ಗೀತೆಗಳನ್ನೇ ಹಾಕಿ ಗಣೇಶೋತ್ಸವ ಆಚರಿಸುವಂತೆ ಮುತಾಲಿಕ್ ಮನವಿ ಮಾಡಿದ್ದಾರೆ. ಹೂವು ಹಣ್ಣು, ಸೌಂಡ್ ಸಿಸ್ಟಮ್ ಏನೇ ವಸ್ತು ಇರಲಿ ಪವಿತ್ರವಾದುದ್ದನ್ನೇ ತೆಗೆದುಕೊಳ್ಳೋಣ, ಹಲಾಲ್ ಮಾಡಿರುವುದನ್ನು ಖರೀದಿ ಮಾಡಬೇಡಿ. ನಮ್ಮ ದೇವರು, ನಮ್ಮ ಗಣಪತಿ ಅಪವಿತ್ರವಾದುದ್ದನ್ನ ಖರೀದಿ ಮಾಡಿದ್ರೆ ಶಾಸ್ತ್ರಕ್ಕೆ ವಿರುದ್ಧವಾಗುತ್ತೆ. ಇನ್ನು ಮೆರಣವಣಿಗೆಯಲ್ಲಿ ಮದ್ಯಪಾನ, ಗುಟ್ಕಾ ನಿಷಿದ್ಧವಾಗಬೇಕು ಎಂದರು.