For the best experience, open
https://m.samyuktakarnataka.in
on your mobile browser.

ಹಳೆಯ ಸಿದ್ದರಾಮಯ್ಯ ಈಗ ಕಳೆದು ಹೋಗಿದ್ದಾರೆ

12:39 PM Jul 17, 2024 IST | Samyukta Karnataka
ಹಳೆಯ ಸಿದ್ದರಾಮಯ್ಯ ಈಗ ಕಳೆದು ಹೋಗಿದ್ದಾರೆ

ಮಂಗಳೂರು: ‘ಹಳೆ ಸಿದ್ದರಾಮಯ್ಯ ಈಗ ಇಲ್ಲ. ಕಳೆದುಹೋಗಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಎಂದಿದ್ದಾರೆ.
ರೈಲ್ವೆ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಬುಧವಾರ ಮಂಗಳೂರಿಗೆ ಆಗಮಿಸಿರುವ ವಿ. ಸೋಮಣ್ಣ ಅವರು, ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿರುವ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ, ಮುಡಾ ಹಗರಣದ ಕುರಿತು ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಸಿಎಂ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ಹಳೇ ಸಿದ್ದರಾಮಯ್ಯ ಹೀಗಿರಲಿಲ್ಲ ‘ನಾನು‌ ಸಿದ್ದರಾಮಯ್ಯ ಅವರ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಇವತ್ತು ಇರುವ ಸಿದ್ದರಾಮಯ್ಯನವರ ವರ್ತನೆ ನೋಡಿ ನನಗೂ ಒಂದು ರೀತಿ ಅನುಮಾನ ಮೂಡಿದೆ, ವಾಸ್ತವವನ್ನು ಯಾರೂ ಮುಚ್ಚಿಡಲು ಆಗಲ್ಲ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಯಾರೂ ತಿಳಿದುಕೊಳ್ಳಬಾರದ. ‘ಸಿದ್ದರಾಮಯ್ಯ ತಪ್ಪು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಬೇಕು. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ ಎಂದರು.

ರೈಲ್ವೇ ಇಲಾಖೆಯಲ್ಲಿ ವಿಪತ್ತು ನಿರ್ವಾಹಣಾ ತಂಡ: ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಯಾವ ರೀತಿಯಲ್ಲಿ ಇದೆಯೋ ಅದಕ್ಕಿಂತ ವಿಭಿನ್ನವಾಗಿ ನಮ್ಮ ರೈಲ್ವೇ ಇಲಾಖೆಯಲ್ಲಿಯೂ ಕೂಡ ವಿಪತ್ತು ನಿರ್ವಾಹಣಾ ತಂಡವನ್ನು ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ವಾರ್ ರೂಮ್ ಗಳನ್ನು ಮಾಡಿದ್ದೇವೆ. ಪ್ರತಿಯೊಂದು ಕಡೆಯಲ್ಲಿಯೂ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಬಾರಿ ಮಳೆ ಹೆಚ್ಚಾಗಿದ್ದು, ಜಿಲ್ಲಾಧಿಕಾರಿಗಳಿಗೆ ನಮ್ಮ ಇಲಾಖೆಯವರು ಕೈ ಜೋಡಿಸಲಿದ್ದಾರೆ ಎಂದರು.

ಕರಾವಳಿಯ ರೈಲು ಮೂಲಸೌಕರ್ಯ ಅಭಿವೃದ್ಧಿಗೆ ನೀಲನಕ್ಷೆ: 40 ವರ್ಷಗಳಿಂದ ಮಂಗಳೂರಿನಲ್ಲಿ ರೈಲ್ವೆ ಸೌಕರ್ಯ ಆಭಿವೃದ್ಧಿ ನನೆಗುದಿಗೆ ಬಿದ್ದಿದೆ. ಕೇರಳ ಮತ್ತು ಗೋವಾ, ತಮಿಳುನಾಡು, ಮಹಾರಾಷ್ಟ್ರ ನಡುವೆ ಮಂಗಳೂರು , ಕಾರವಾರ ಭಾಗದಲ್ಲಿ ರೈಲ್ವೆ ಸೌಕರ್ಯ ಅಭಿವೃದ್ಧಿ ನಿರೀಕ್ಷಿತ ರೀತಿಯಲ್ಲಿ ನಡೆದಿಲ್ಲ. ತಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಕರಾವಳಿಯ ರೈಲು ಮೂಲಸೌಕರ್ಯ ಅಭಿವೃದ್ಧಿಗೆ ಎರಡು ತಿಂಗಳಲ್ಲಿ ನೀಲನಕ್ಷೆ ತಯಾರಿಸಲಿದ್ದೇವೆ ಎಂದರು.