ಹವಾಮಾನ ಸರ್ವೇಕ್ಷಣಾ ಉಪಗ್ರಹ ಉಡಾವಣೆಗೆ ಕ್ಷಣಗಣನೆ
03:59 PM Feb 17, 2024 IST | Samyukta Karnataka
ಬೆಂಗಳೂರು: ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಈಗ ಹವಾಮಾನಕ್ಕೆ ಸಂಬಂಧಿಸಿದ ಹೊಸ ಉಪಗ್ರಹ ಇನ್‌ಸ್ಯಾಟ್– 3ಡಿಎಸ್ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಪಗ್ರಹ ಕೇಂದ್ರದಲ್ಲಿ ಫೆಬ್ರವರಿ 17 ರ ಶನಿವಾರ ಸಂಜೆ 5.35ಕ್ಕೆ ಇನ್ಸಾಟ್-3ಡಿಎಸ್ ಉಪಗ್ರಹವನ್ನು ಜಿಎಸ್‌ಎಲ್‌ವಿ ಎಂಕೆ– 2 ಉಡಾವಣಾ ವಾಹನದ ಮೂಲಕ ಉಡ್ಡಯನ ಮಾಡಲಾಗತ್ತದೆ, ಸೈಕ್ಲೋನ್‌ಗಳಂತಹ ನಿಖರ ಮಾಹಿತಿಯನ್ನು ಪಡೆದು ಜನರಿಗೆ ಒದಗಿಸಲು ಭವಿಷ್ಯದಲ್ಲಿ ಈ ಉಪಗ್ರಹ ಉಪಯುಕ್ತವಾಗಲಿದೆ ಎಂದಿದ್ದಾರೆ. ಈಗಾಗಲೇ ಹವಾಮಾನ ಮುನ್ಸೂಚನೆಗಳ ಕುರಿತು ಮಾಹಿತಿ ನೀಡುವ ಮೂರು ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.