ಹಾಡಹಗಲೇ ಬ್ಯಾಂಕ್ ದರೋಡೆ
02:21 PM Jan 17, 2025 IST
|
Samyukta Karnataka
ಕಾರಿನಲ್ಲಿ ಬಂದ 5 ಮಂದಿ ಆಗಂತುಕರು
ಮಂಗಳೂರು: ಕಾರಿನಲ್ಲಿ ಬಂದ 5 ಮಂದಿ ಆಗಂತುಕರು ಮಾರಕಾಸ್ತ್ರ ತೋರಿಸಿ ಚಿನ್ನ, ಒಡವೆ, ಹಣವನ್ನೆಲ್ಲಾ ದರೋಡೆ ನಡೆಸಿದ ಘಟನೆ ನಡೆದಿದೆ, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದ್ದು. ಕಾರಿನಲ್ಲಿ ಬಂದ 5 ಮಂದಿ ಆಗಂತುಕರು ಮಾರಕಾಸ್ತ್ರ ತೋರಿಸಿ ಚಿನ್ನ, ಒಡವೆ, ಹಣವನ್ನೆಲ್ಲಾ ದರೋಡೆ ನಡೆಸಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್ ತಂಡ ಆಗಂತುಕರಿಗಾಗಿ ಬಲೆ ಬೀಸಿದ್ದಾರೆ.
Next Article