ಹಾಲು ರಸ್ತೆಗೆ ಸುರಿದು ಮಹಿಳೆಯರಿಂದ ಆಕ್ರೋಶ
ಸೂಪರ್ ಸೀಡ್ ಹಾಕಿದ್ದಾರೆ, ಕೋರ್ಟ್‌ನಲ್ಲಿದೆ ಆದೇಶ ಬಂದ್ಮೇಲೆ ಬಿಲ್ ಆಗತ್ತೆ
ಮಂಡ್ಯ: ಸಚಿವರು ದ್ವೇಷದಿಂದ ಹಾಲು ಖರೀದಿಸದಂತೆ ಮನ್ಮುಲ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಇಂದು ಡೈರಿಯಲ್ಲಿ ಹಾಲು ಖರೀದಿಸಿಲ್ಲ ಎಂದು ಆರೋಪಿಸಿದ ಹಾಲು ಉತ್ಪಾದಕರು ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಜಲ್ಲೆಯ ನಾಗಮಂಗಲ ತಾಲ್ಲೂಕಿನ ಕಾಡಂಕನಹಳ್ಳಿ ಗ್ರಾಮದಲ್ಲಿ ಹಾಲು ಖರೀದಿ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ, ಗ್ರಾಮದ ಹಾಲನ್ನು ಸ್ವೀಕರಿಸದಂತೆ ಉತ್ಪಾದಕರ ಸಂಘಕ್ಕೆ ಸೂಚನೆ ನೀಡಿದ್ದಾರೆ. ಸೂಪರ್ ಸೀಡ್ ಆರೋಪ ಕೇಳಿಬಂದಿದೆ ಹಾಗಾಗಿ ಸ್ವೀಕರಿಸುತ್ತಿಲ್ಲ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸಚಿವರ ಸೂಚನೆ ಮೇರೆಗೆ ಅಧಿಕಾರಿಗಳು ನಮ್ಮ ಗ್ರಾಮದ ಹಾಲನ್ನು ಸ್ವೀಕರಿಸುತ್ತಿಲ್ಲ. ಎರಡು ತಿಂಗಳಿನಿಂದ ಬಿಲ್ ಕೂಡ ಕೊಟ್ಟಿಲ್ಲ. ಯಾಕೆ ಅಂತ ಕೇಳಿದ್ರೆ ಸೂಪರ್ ಸೀಡ್ ಹಾಕಿದ್ದಾರೆ, ಕೋರ್ಟ್‌ನಲ್ಲಿದೆ ಆದೇಶ ಬಂದ್ಮೇಲೆ ಬಿಲ್ ಆಗತ್ತೆ ಅಂತ ಹೇಳುತ್ತಿದ್ದಾರೆ. ಹಾಲು ಖರೀದಿಸದ ಹಿನ್ನೆಲೆಯಲ್ಲಿ ಮಹಿಳೆಯರು ರಸ್ತೆಗೆ ಹಾಲು ಚೆಲ್ಲಿ ಆಕ್ರೋಶ ಹೊರಹಾಕಿದ್ದಾರೆ.