ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಾವೇರಿ: ಮತದಾನ ಬಹಿಷ್ಕರಿಸಿದ ನಿವಾಸಿಗಳು

12:37 PM Nov 13, 2024 IST | Samyukta Karnataka

ಅಂಜುಮನ್ ಇಸ್ಲಾಂ ಹೆಸರಿಗೆ ದಾಖಲಾದ ವಸತಿ ಪ್ರದೇಶ: ಹಕ್ಕು ಪತ್ರ ನೀಡದ ಕಂದಾಯ ಇಲಾಖೆ

ಹಾವೇರಿ (ಸವಣೂರ): ಶಿಗ್ಗಾಂವ ಸವಣೂರ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಸವಣೂರ ದಂಡಿನಪೇಟೆ ನಿವಾಸಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ 70-80 ವರ್ಷಗಳಿಂದ ಸುಮಾರು 70-80 ಮನೆಗಳಲ್ಲಿ ಹಿಂದೂ, ಮುಸ್ಲಿಂ ಸೇರಿಕೊಂಡು 500-550 ಜನರು ವಾಸವಾಗಿದ್ದೇವೆ. ನಾವು ವಾಸವಿರುವ ಈ ಪ್ರದೇಶ ಮೂಲತಃ ಕಂದಾಯ ಭೂಮಿಯಾಗಿದ್ದು, ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಈ ಭೂಮಿಯನ್ನು ಅಂಜುಮನ್ ಇಸ್ಲಾಂ ಸಂಸ್ಥೆಯವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈ ಕುರಿತು ಕಂದಾಯ ಇಲಾಖೆಯ ತಹಶಿಲ್ದಾರ, ಎಸಿ, ಡಿಸಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರೂ ಹೇಳಿಕೆಗೆ ಮಾತ್ರ ಸರಿಪಡಿಸುವ ಭರವಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸತ್ತು ಈ ಬಾರಿ ಹಕ್ಕುಪತ್ರ ನೀಡುವವರೆಗೂ ಮತದಾನಾಡುವುದಿಲ್ಲ ರಂದು ಪಟ್ಟು ಹಿಡಿದಿದ್ದಾಗಿ ತಿಳಿಸಿದರು.

ಈ ವೇಳೆ ಲಕ್ಷ್ಮಿ ಕುಂದಗೋಳ, ಮಾಲತೇಶ ಕುಂದಗೋಳ, ರಜಾಕ ಮಕಾನದಾರ, ರಫೀಕಸಾಬ ಮತ್ತಿತರರು ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

Tags :
#ಉಪಚುನಾವಣೆ#ಹಾವೇರಿ
Next Article