For the best experience, open
https://m.samyuktakarnataka.in
on your mobile browser.

ಹಿಂದೂಗಳ ಮೇಲೆ ಹೆಚ್ಚುತ್ತಿವೆ ದೌರ್ಜನ್ಯ..

02:04 PM Jan 03, 2024 IST | Samyukta Karnataka
ಹಿಂದೂಗಳ ಮೇಲೆ ಹೆಚ್ಚುತ್ತಿವೆ ದೌರ್ಜನ್ಯ

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂತ ನಂತರ ರಾಜ್ಯದಲ್ಲಿ ತುಷ್ಠೀಕರಣದ ರಾಜಕಾರಣ ನಡೆಯುತ್ತಿದೆ. ಹಿಂದೂಗಳ ಮೇಲೆ ದಿನೇ ದಿನೇ ದೌರ್ಜನ್ಯಗಳು ಹೆಚ್ಚಾಗುತ್ತವೆ. ಯಾರೂ ಭಯಪಡುವ ಅಗತ್ಯವಿಲ್ಲ. ಸಾಮಾನ್ಯ ಕಾರ್ಯಕರ್ತರ ಬೆನ್ನಿಗೆ ಬಿಜೆಪಿ ಸದಾ ನಿಲ್ಲುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಲ್ಪ ಸಂಖ್ಯಾತರ ತುಷ್ಟೀಕರಣ ಆರಂಭಿಸಿದ್ದು ಹುಬ್ಬಳ್ಳಿಯಿಂದಲೇ. ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ಮೀಸಲೀಡುವುದಾಗಿ ಹೇಳಿದ್ದ ಸಿದ್ದರಾಮಯ್ಯ, ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸ್ಲಿಮರಿಗೆ ಎಂದಿದ್ದರು‌. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಕಿ ಭಾಗಿಯಾದವರು ಅಮಾಯಕರು. ಅವರ ಬಿಡುಗಡೆಗಡ ಡಿಕೆ ಶಿವಕುಮಾರ್ ಶಿಫಾರಸ್ಸು ಮಾಡಿದ್ದರು. ಇವೆಲ್ಲವೂ ತುಷ್ಠೀಕರಣ ರಾಜಕಾರಣದ ಪರಮಾವಧಿ ಎಂದು ಕಿಡಿ ಕಾರಿದರು.
ಹಿಂದೂ ವಿರೋಧಿ ಕಾಂಗ್ರೆಸ್,
ಕೋರ್ಟ್ ಗೆ ರಜೆ ಇರುವ ಸಮಯ ನೋಡಿಕೊಂಡು ಶ್ರೀಕಾಂತ ಅವರನ್ನು ಬಂಧಿಸಿದ್ದಾರೆ. ಸರ್ಕಾರ ಬರತ್ತೆ ಹೋಗತ್ತೆ. ಆದರೆ, ಪೊಲೀಸ್ ಇಲಾಖೆ ನ್ಯಾಯದ ಪರ ಕೆಲಸ ಮಾಡಬೇಕು. ಯಾರದ್ದೊ ಒತ್ತಡಕ್ಕೆ ಮಣಿದು ಕೆಕಸ ಮಾಡಬಾರದು ಎಂದು ಕಿಡಿ ಕಾರಿದರು. 31 ವರ್ಷದ ಹಳೆಯ ಕೇಸ್ ಕೆದಕಿದ್ದೀರಿ. ಶ್ರೀಕಾಂತ್ ಪೂಜಾರಿ ಮಾತ್ರವಲ್ಲ, ಇಲ್ಲಿ ಇರೋರನ್ನೆಲ್ಲ ಬಂಧನ ಮಾಡಿ. ಹೋರಾಡಲು ನಾವು ರೆಡಿ ಇದ್ದೇವೆ. ರಾಹುಲ್ ಗಾಂಧಿ ಸೋನಿಯಾ ಗಾಂಧಿ ಮೆಚ್ಚಿಸೋಕೆ ಕೆಲಸ ಮಾಡಿಡದೇ, ಅಮಾಯಕರನ್ನು ಬಂಧಿಸುವ ಪೊಲೀಸ್ ಅಧಿಕಾರಿಯನ್ನು ತಕ್ಷಣ ಅಮಾನತ್ತು ಮಾಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.