ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಿಂದೂ ಅನ್ನೋದು ಅವಮಾನಕರ ಪದ: ಭಗವಾನ್ ವಿವಾದಾತ್ಮಕ ಹೇಳಿಕೆ

12:18 PM Jan 13, 2025 IST | Samyukta Karnataka

ಹೀನನಾಗಿರುವವನು ಹಿಂದೂ, ಇದೊಂದು ಅವಮಾನಕರ ಶಬ್ದ

ರಾಯಚೂರು: ಹಿಂದೂ ಅನ್ನೋದು ಅವಮಾನಕರ ಶಬ್ದ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದೂ ಎಂದು ಕೆ.ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಯಚೂರಿನ ದೇವದುರ್ಗದ ಕನಕಗುರು ಪೀಠ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಹಿಂದೂ ಶಬ್ದ ಬಂದಿದ್ದು 1030ನೇ ಇಸವಿಯಲ್ಲಿ, ಪರ್ಷಿಯನ್ ಲೇಖಕ ಆಲ್ಬರೋನಿ ಭಾರತದ ಬಗ್ಗೆ ಬರೆಯುತ್ತಾ ಸಿಂಧೂ ನದಿಯನ್ನು ಹಿಂದೂ ಅಂತ ಕರೆದರು. ಪರ್ಷಿಯನ್ ಭಾಷೆಯಲ್ಲಿ 'ಸ' ಕಾರ ಇಲ್ವಂತೆ, 'ಸ' ಕಾರ 'ಹ' ಕಾರ ಆಗುತ್ತಂತೆ. ಮುಂದೆ ಅಕ್ಟರ್‌ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ ಎಂದು ಹೆಸರು ಬಂತು. ಹೀಗಾಗಿ ರಾಮಾಯಣ, ಮಹಾಭಾರತ, ಪುರಾಣ, ವೇದ ಗ್ರಂಥಗಳಲ್ಲಿ ಹಿಂದೂ ಅನ್ನೋ ಹೆಸರಿಲ್ಲ ಎಂದರು. ಮುಂದೆ ಅಕ್ಬರ್‌ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ್ ಎಂಬ ಹೆಸರು ಬಂತು. ಹೀಗಾಗಿ ಹಳೆಯ ಗ್ರಂಥಗಳಲ್ಲಿ ಹಿಂದೂ ಎನ್ನುವ ಶಬ್ಧ, ವೇದಗಳು, ಪುರಾಣಗಳು ಉಪನಿಷತ್ ಗಳಲ್ಲಿ ಹಿಂದೂ ಎನ್ನುವ ಪದ‌ ಇಲ್ಲ. ಈ ಹಿಂದೂ ಎನ್ನುವ ಶಬ್ದಕ್ಕೆ ಕಾಶ್ಮೀರಿ ಶೈವ ಗ್ರಂಥದಲ್ಲಿ ಹೀರಂಚ ದುಶ್ಯಂತೈವ ಹಿಂದೂ ವಿದುಶವಿಚತೇ ಅಂತ ಇದೆ. ಇದರ ಅರ್ಥ ಯಾರು ಹೀನನಾಗಿದಾನೋ, ಯಾರು ದೂಷಣೆಗೊಳಗಾಗಿದಾನೋ ಅವನು ಹಿಂದೂ ಅಂತ ಅವರು ಹೇಳ್ತಾರೆ. ಹಾಗಾಗಿ ಹಿಂದೂ ಎನ್ನುವಂತ ಶಬ್ಧ ಬಹಳಷ್ಟು ಅಪಮಾನಕರವಾಗಿದೆ, ಅದೇ ರೀತಿಯಾಗಿ ಚಾತುರ್ವರ್ಣದ ಪ್ರಕಾರ, ಮನುಸ್ಮೃತಿ ಪ್ರಕಾರ ಶೂದ್ರ ಎಂಬ ಪದವೂ ಅಪಮಾನಕರವಾಗಿದೆ. ಶೂದ್ರ ಎಂದರೆ ಗುಲಾಮ ಎಂಬರ್ಥ ಬರುತ್ತದೆ. ಇನ್ನೊಂದು ಅರ್ಥದಲ್ಲಿ ಶೂದ್ರ ಎಂದರೆ ತಂದೆಗೆ ಹುಟ್ಟಿದವನಲ್ಲ ಎಂಬ ಅರ್ಥ ಬರುತ್ತದೆ. ಹೀಗಾಗಿ ಇಷ್ಟೊಂದು ಅವಮಾನಕರವಾದ ಶಬ್ದಗಳನ್ನು ನಮ್ಮ ಜನ ಬಳಸೋದನ್ನು ಬಿಡಬೇಕು, ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಸಂವಿಧಾನ ತೆಗೆದು ಹಾಕಲು ‌ನಮ್ಮ ದೇಶದ ಜನ ಅವಕಾಶ ನೀಡಬಾರದು. ಮನುಸ್ಮೃತಿಯನ್ನ ವಾಪಸ್ ತರಬಾರದು. ಮನುಸ್ಮೃತಿಯನ್ನ ಬಾಬಾ ಸಾಹೇಬರು, ಪೆರಿಯಾರ್ ಸುಟ್ಟು ಹಾಕಿದರು. ಸಂವಿಧಾನ ಪರ ಹೋರಾಡಬೇಕು ಮನುಸ್ಮೃತಿಯನ್ನ ತಿರಸ್ಕರಿಸಬೇಕು, ಒಂದೊಂದು ಮಠ ಒಂದೊಂದು ಸಮುದಾಯಕ್ಕೆ ಸೀಮಿತವಾಗಿವೆ, ಇದರಿಂದ ಜನರ ಮನಸ್ಸು ಬಹಳ ಸಂಕುಚಿತವಾಗುತ್ತಿದೆ. ಎಲ್ಲರೂ ಸಮಾನರು ಅನ್ನೋ ಭಾವನೆಗೆ ಅಡ್ಡಿ ಬರುತ್ತಿದೆ. ಜನ ಇದನ್ನ ದಾಟಿ ಬರಬೇಕು. ದೇಶದಲ್ಲಿ ಬೌದ್ಧ ಧರ್ಮ 1,500 ವರ್ಷಕಾಲ ಹರಡಿತ್ತು. ಬುದ್ಧ ಈ ಮಣ್ಣಿನ ಮಗ ಒಬ್ಬ ರೈತನ ಮಗ, ಬೌದ್ಧ ಸ್ತೂಪಗಳು, ದೇವಾಲಯಗಳು ಎಲ್ಲವನ್ನೂ ಒಡೆದು ಹಾಕಿದ್ದಾರೆ. ಯಾರು ಮಾಡಿದ್ದು ಅದನ್ನ ಪತ್ತೆ ಹಚ್ಚಿ ಮೂಲ ವ್ಯಕ್ತಿಗಳಿಗೆ ವಾಪಸ್ ಕೊಡಬೇಕು ಅಂತ ಭಗವಾನ್ ಹೇಳಿದ್ದಾರೆ.

Tags :
#ಭಗವಾನ್‌#ರಾಯಚೂರು#ವಿವಾದಾತ್ಮಕ ಹೇಳಿಕೆ#ಹಿಂದು
Next Article