For the best experience, open
https://m.samyuktakarnataka.in
on your mobile browser.

ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಆರಂಭ

12:48 PM Oct 08, 2023 IST | Samyukta Karnataka
ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಆರಂಭ

ಚಿತ್ರದುರ್ಗ : ರಾಜ್ಯದಲ್ಲೇ ಅತೀಹೆಚ್ಚು ಪ್ರಸಿದ್ದಿ ಪಡೆದಿರುವ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಭಾನುವಾರ ಅತೀ ವಿಜೃಂಭಣೆ ಹಾಗೂ ವೈಭವೋಪೇತವಾಗಿ ಜರುಗಿತು.
ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಸಂಘಟನೆಗಳಿಂದ ನಗರದ ಜೈನಧಾಮದಲ್ಲಿ ಪ್ರತಿಷ್ಟಾಪಿಸಿರುವ ಹಿಂದೂ ಮಹಾ ಗಣಪತಿ ಮಹೋತ್ಸವ ವರ್ಷದಿಂದ ವರ್ಷಕ್ಕೆ ಮೆರಗು ಪಡೆಯುತ್ತಿದ್ದು, ಜಿಲ್ಲೆ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶೋಭಾಯಾತ್ರೆಗೆ ಆಗಮಿಸಿದ್ದರು.

ಹಿಂದೂ ಧರ್ಮದ ಜಾಗೃತಿ ಮತ್ತು ಸಂಸ್ಕೃತಿಗೆ ಒತ್ತು ನೀಡಿರುವ ಈ ಗಣೇಶೋತ್ಸವಕ್ಕೆ ಕೇರಳ, ಮಹಾರಾಷ್ಟ್ರ ರಾಜ್ಯದ 10 ಕ್ಕೂ ಹೆಚ್ಚುಬಕಲಾ ತಂಡಗಳು ಭಾಗವಹಿಸಿ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು.
ಶೋಭಾಯಾತ್ರೆಯು ಸಾಗಲಿರುವ ನಗರದ ಬಿಡಿ ರಸ್ತೆಯಿಂದ ಕನಕ ವೃತ್ತದ ಹೊರಗೆ ಡಿಜೆ ಸೌಂಡಿಗೆ ಯುವಕರು ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದರು.
ರಸ್ತೆಯುದ್ದಕ್ಕೂ ಭಕ್ತರ ಧಣಿವಾರಿಸಲು ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಿದ್ದರು.
ಶೋಭಾಯಾತ್ರೆಗೆ ಚಾಲನೆ ನೀಡಿದ ಮಹರಾಷ್ಟ್ರ ಕೋಲ್ಲಾಪುರದ ಮನ್ನೇರಿಮಠ್ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸೇರಿದಂತೆ ಕೆಲ ನಾಯಿಗಳು ಬೊಗಳುತ್ತಿವೆ. ಅವರಿಗೆಲ್ಲ ಬುದ್ದಿ ಕಲಿಸುವ ರೀತಿಯಲ್ಲಿ ದೇಶದೆಲ್ಲೆಡೆ ಹಿಂದೂ ಉತ್ಸವಗಳು ಯಾವುದೇ ದ್ವೇಷ, ಅಸೂಹೆ, ಗಲಾಟೆಗಳು ಇಲ್ಲದೆ ನಡೆಯಬೇಕು ಎಂದು ಕರೆ ನೀಡಿದರು.
ಸ್ಟಾಲೀನ್ ಅವರ ತಾತ ಪಿರಿಯಾನಕ್ ರಾಮಸ್ವಾಮಿ ಎಂಬಾತ ಸನಾತನ ಹಿಂದೂ ಧರ್ಮವನ್ನು ಕ್ಷೀಣಿಸುತ್ತೇನೆ ಎಂದು ಬಂದಿದ್ದ, ಅವನೊಬ್ಬ ಕ್ರಿಶ್ಚಿಯನ್ ಏಜೆಂಟ್. ಅವನಿಂದ ಏನನ್ನು ಮಾಡಲು ಆಗಲಿಲ್ಲ. ಅವನ ವಿಚಾರಗಳನ್ನು ಕೇಳಿಸಿಕೊಂಡು ಕೆಲವು ನಾಯಿಗಳು ಬೊಗಳುತ್ತಿವೆ. ಅವರಿಂದಲೂ ಕೂಡ ಏನು ಮಾಡಲು ಆಗುವುದಿಲ್ಲ. ಇಂತಹ ನಾಯಿಗಳು ಬೊಗಳುವುದರಿಂದ ನಮ್ಮ ಹಿಂದೂ ಸನಾತನ ಧರ್ಮ ಇನ್ನೂ ಗಟ್ಟಿ ಆಗುತ್ತಾ ಹೋಗುತ್ತುಲಿದ್ದು, ಆ ರೀತಿ ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯಲ್ಲಿ ಹಿಂದೂಗಳೂ ಒಗ್ಗೂಡಿದ್ದಾರೆ. ಇದು ದೇಶದ ಉದ್ದಕ್ಕೂ ಪಸರಿಸಿ, ಇಂತಹ ಉತ್ಸವಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಜಗತ್ತಿನ ಕಲ್ಯಾಣಕ್ಕಾಗಿ ಆನೇಕ ಗುಣಗಳ ರೂಪದಲ್ಲಿ ನಮ್ಮ ಗಣಪ ಹುಟ್ಟಿದ್ದಾನೆ. ಕಾಶ್ಮೀರದಿಂದ ಕನ್ಯಕುಮಾರಿ ಎಲ್ಲರೂ ಗಣಪನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಕೆಲ ಬೇರೆ ಧರ್ಮದವರು ಗಣಪತಿ ಪೂಜಿಸುವಾಗ ನಮ್ಮಲ್ಲಿರವ ಕೆಲವರು ದೂಷಣೆ ಮಾಡುವುದು ಸರಿಯಲ್ಲ. ನಮ್ಮ ಧರ್ಮಾಚರಣೆಗಳನ್ನು ದೂಷಣೆ ಮಾಡುವವರಿಗೆ ದೇವರು ಸದ್ಬುದ್ದಿ ನೀಡಲಿ ಎಂದು ಹೇಳಿದರು.

ಇತಿಹಾಸದಲ್ಲಿ ಮೊದಲು ಯಾರೋ ಹೇಳಿದ ರೀತಿ‌ ಇಂದು ಕೂಡ ನಾವುಗಳು ಪಾಲಿಸಿಕೊಂಡು ಹೋಗಬೇಕು ಎಂಬ ಧರ್ಮ ನಮ್ಮದಲ್ಲ. ನಮಗೆ ಯಾವ ರೀತಿ ಬೇಕೋ, ಆ ರೀತಿ ಪೂಜಿಸಿಕೊಂಡು ಹೋಗುತ್ತೇವೆ. ಸನಾತನ‌ ಹಿಂದೂ ಧರ್ಮ ಉದಾರ ಮನಸ್ಸಿನವರು ಎಂದರು.
ದೇಶದ ಎಲ್ಲಾ ಕಡೆ ಹಿಂದೂ ಉತ್ಸವಗಳು ವಿಜೃಂಭಣೆಯಿಂದ ನಡೆದು, ಸ್ಟಾಲಿನ್ ಎಂಬ ನಾಯಿ‌ಗೆ ಸನಾತನ ಧರ್ಮ ಎಂದರೆ ಹೇಗಿರುತ್ತೇ ಅಂತಾ ತೋರಿಸಿ, ಅವನು ಕೂಡ ನಮ್ಮ ಉತ್ಸವಗಳಲ್ಲಿ ಭಾಗವಹಿಸುವಂತೆ ಮಾಡುವುದರ ಜೊತೆಗೆ ನಮ್ಮಲ್ಲಿ ಅಲುಗಾಡುತ್ತಿರುವ ಕೆಲ ಬೇರುಗಳು ನಮ್ಮಲ್ಲೇ ಗಟ್ಟಿಗೊಳ್ಳುವಂತಾಗೆಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಾದಾರಚೆನ್ನಯ್ಯ ಸ್ವಾಮೀಜಿ, ಶ್ರೀ ಕಬೀರಾನಂದ ಸ್ವಾಮೀಜಿ, ಶ್ರೀ ಪುರುಷೋತ್ತಾಮನಂದ ಸ್ವಾಮೀಜಿ, ಶ್ರೀ ಹಿಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಕೆ.ಎಸ್.ನವೀನ್, ಗೌರಾವಾಧ್ಯಕ್ಷ ಷಡಾಕ್ಷರಪ್ಪ, ಅಧ್ಯಕ್ಷ ಜಿ.ಎಂ.ಸುರೇಶ್, ಭದ್ರಿನಾಥ್ ಪ್ರಭಂಜನ್ ಹಾಜರಿದ್ದರು.