ಹಿಪ್ಪರಗಿ ಜಲಾಶಯ ಗೇಟ್‌ವೊಂದರ ತಾಂತ್ರಿಕ ದೋಷ
ಬಾಗಲಕೋಟೆ: ಮಹಾರಾಷ್ಟ್ರದಿಂದ ಆಗಮಿಸುವ ಕೃಷ್ಣಾ ನದಿಯ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಜಲಾಶಯದಲ್ಲಿನ ಗೇಟ್ ನಂ. 7ರಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಕಾರಣ ಗೇಟ್ ಮುಚ್ಚುವಲ್ಲಿ ತೀವ್ರ ತೊಂದರೆಯುಂಟಾಗಿದೆ.
ಸದ್ಯ ಮಹಾರಾಷ್ಟ್ರದಿಂದ ನೀರು ಹರಿವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರತಿದಿನ 15 ಸಾವಿರ ಕ್ಯುಸೆಕ್‌ನಷ್ಟು ಮಾತ್ರ ನೀರು ಬರುತ್ತಿದೆ. ಈಗಾಗಲೇ ಹಿಪ್ಪರಗಿಯ ಜಲಾಶಯದಲ್ಲಿನ 6 ಟಿಎಂಸಿಯಷ್ಟು ನೀರಿನ ಪ್ರಮಾಣವಿದೆ.
ಮಳೆಗಾಲ ಸಂದರ್ಭದಲ್ಲಿ ಇಲ್ಲಿನ 22 ಗೇಟ್‌ಗಳ ಪೈಕಿ ಮೂರು ಗೇಟ್‌ಗಳಿಂದ ಹೆಚ್ಚಿನ ನೀರನ್ನು ಹೊರಹಾಕುವಲ್ಲಿ ಕಾರಣವಾಗಿತ್ತು. ಇದೀಗ ನೀರಿನ ಪ್ರಮಾಣ ಕಡಿಮೆಯಾದ್ದರಿಂದ ಗೇಟ್‌ಗಳನ್ನು ಮುಚ್ಚುವ ಸಂದರ್ಭ ಗೇಟ್ ನಂ.7 ನೀರಿನ ರಭಸಕ್ಕೆ ಹಾಗು ಇತರೆ ತಾಂತ್ರಿಕ ದೋಷ ಕಾರಣ ಸಂಪೂರ್ಣ ಗೇಟ್ ಮುಚ್ಚುವಲ್ಲಿ ಸಮಸ್ಯೆ ಕಾಡುತ್ತಿದೆ.
ಎಸಿ ಭೇಟಿ: ಎಲ್ಲ 22 ಗೇಟ್‌ಗಳನ್ನು ಮುಚ್ಚುವಲ್ಲಿ ಕಾರಣವಾಗಬೇಕಿದ್ದ ಹಿಪ್ಪರಗಿ ಜಲಾಶಯದಲ್ಲಿನ ಗೇಟ್ ನಂ.7 ರ ತಾಂತ್ರಿಕ ದೋಷ ಕುರಿತು ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ಹಾಗೂ ತಹಶೀಲ್ದಾರ್ ಗಿರೀಶ ಸ್ವಾದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.