ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಿರಿಯ ಪತ್ರಕರ್ತ ಅನಂತ ವೈದ್ಯ ಇನ್ನಿಲ್ಲ

12:55 PM Jul 24, 2023 IST | Samyukta Karnataka

ಯಲ್ಲಾಪುರ : ಹಿರಿಯ ಪತ್ರಕರ್ತ, ಅಂಕಣಕಾರ, ಅನಂತ ವೈದ್ಯ (75) ಅವರು ಅನಾರೋಗ್ಯ ದಿಂದ ಸೋಮವಾರ ನಿಧನರಾಗಿದ್ದಾರೆ. ಪಟ್ಟಣದ ಹುಲ್ಲೂರ ಮನೆ ಯಲ್ಲಿರುವ ಸ್ವಗೃಹ ದಲ್ಲಿ ಅವರ ಪಾರ್ಥಿವ ಶರೀರ ಕ್ಕೆ ಅಂತಿಮ ವಿಧಿ ವಿಧಾನ ಸಲ್ಲಿಸಲಾಯಿತು.ಅವರು ಮೂಲ
ಅಂಕೋಲಾ ತಾಲೂಕಿನ ವೈದ್ಯಹೆಗ್ಗಾರಿನವರಾಗಿದ್ದು,ಮಡದಿ ವಿಜಯಶ್ರೀ, ಇಬ್ಬರು ಪುತ್ರಿಯರಾದ ಕವಿತಾ, ಸಂಗೀತಾ, ಓರ್ವ ಪುತ್ರ.ಕಿರಣ ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ಕೆಲವು ವರ್ಷ ಕಾರ್ಯಮಾಡಿದ್ದರು ಅವರು ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವಿದ್ದ ಜ್ಞಾನಸಾಗರ ವೈದ್ಯರಾಗಿದ್ದರು.
ಯಕ್ಷಗಾನದ ಮೊಟ್ಟಮೊದಲ ಮಾಸಪತ್ರಿಕೆ ಯಕ್ಷರಂಗ ವನ್ನು ಸಂಪಾದಕರಾಗಿ ಹಲವು ವರ್ಷ ತಮ್ಮ ಪ್ರಕಾಶ ಪ್ರಿಂಟಿಂಗ್ ಪ್ರೆಸ್ಸಿನ ಮೂಲಕ ಪ್ರಕಟಿಸಿದವರು. ಯಕ್ಷಗಾನದ ಅರ್ಥಧಾರಿಗಳಾಗಿ ತುಂಬ ಹೆಸರು ಮಾಡಿದ್ದರು. ಯಕ್ಷಗಾನದ ಶ್ರೇಷ್ಠ ಕಲಾವಿದರೂ ಅರ್ಥಧಾರಿಗಳಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟ ರವರ ಚಿಂತನೆಗಳನ್ನು ಸಂಗ್ರಹಿಸಿ ಜ್ಞಾನಯಜ್ಞ ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿದ್ದರು. ಇವರು ಬರೆದ " ಪಾದುಕಾ ಪ್ರಧಾನ" ಗ್ರಂಥ ಕೆಲವು ವರ್ಷಗಳ ಕೆಳಗೆ ಪ್ರಕಟಗೊಂಡಿದೆ. ಪುರಾಣ ಮತ್ತು ಭಾರತಗಳಲ್ಲಿನ ವಿಶಿಷ್ಟ ಸಂಗತಿಗಳನ್ನಾಧರಿಸಿದ ಅಂಕಣವನ್ನು ರಾಜ್ಯ ಮಟ್ಟದ ಪತ್ರಿಕೆ ಯಲ್ಲಿ ಬರೆದಿರುವರು.

Next Article