ಹಿರಿಯ ಸಂಶೋಧಕ ನ್ಯಾಯವಾದಿ ಇನ್ನಿಲ್ಲ
ಯಾದಗಿರಿ: ಇತಿಹಾಸ ಸಂಶೋಧಕ, ಪ್ರಕರವಾಗ್ಮಿ, ಸಾಮಾಜಿಕ ಚಿಂತಕ, ಖ್ಯಾತ ವಕೀಲರು, ಆರ್ ಎಸ್ ಎಸ್ ಹಿನ್ನಲೇಯುಳ್ಳ ಹಿರಿಯ ವಕೀಲರಾದ ಭಾಸ್ಕರರಾವ ಮುಡಬೋಳ್ ಹೃದಯಾಘಾತದಿಂದ ನಿಧನ.
ಅಂತಿಮ ದರ್ಶನ ಮದ್ಯಾನ್ಹ ೨ ಗಂಟೆವರೆಗೆ ಶಹಾಪುರದ ಮನೆಯಬಳಿ ಇರುತ್ತದೆ. ನಂತರ ಸ್ವಗ್ರಾಮ ಮುಡಬೋಳದ ಜಮೀನಲ್ಲಿ ಸಾಯಂಕಾಲ ೪ ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ.
ಗಿರಿ ಜಿಲ್ಲೆಗೆ ಮತ್ತೊಂದು ಸಾಂಸ್ಕೃತಿಕ ರಾಯಭಾರಿಯ ಕೊಂಡಿ, ಚಿಂತಕ, ನ್ಯಾಯವಾದಿ, ವಾಗ್ಮಿಯ ಕಳೆದುಕೊಂಡು ಬಡವಾಯಿತು.
ವಕೀಲಿಕಿ ವೃತ್ತಿ ಪ್ರೀತಿಸಿದಷ್ಟೆ ಕೃಷಿಯನ್ನು , ಗೋ ಸಾಕಾಣೆ ಪ್ರೀತಿ ಹೊಂದಿದ್ದ ಅವರು ನಿತ್ಯ ಗ್ರಾಮಕ್ಕೆ ಹೋಗಿ ಹಸುಗಳಿಗೆ ಮೇವು, ನೀರು ಆರೈಕೆ ಮಾಡಿ ಬರುತ್ತಿದ್ದರು...
ಸುರಪುರ ರಾಜ ಮನೆತನದ ಬಗ್ಗೆ ಮರೆತು ಹೋದ ಸುರಪುರ ಸಂಸ್ಥಾನ ಪುಸ್ತಕವು ಗಿರಿ ಜಿಲ್ಲೆಯ ರಾಜರ ಕುರಿತು ಬರೆದ ಪುಸ್ತಕವು ಪ್ರಬಲ ಶಕ್ತಿಯ ಅನಾವರಣ ಮಾಡಿದ್ದರು.
ಸದಾ ರೈತ ಪರ ಇದ್ದ ಅವರು ಕೇಂದ್ರ ಸರ್ಕಾರದ ಇತ್ತೀಚಿನ ಆರು ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದರು ಆ ಕುರಿತು ರಾಷ್ಟ್ರ ಮಟ್ಟದ ಹೋರಾಟದಲ್ಲಿ ಕಲ್ಯಾಣ ಭಾಗದಿಂದ ನಾಯಕತ್ವ ವಹಿಸಿದ್ದರು.
ರಾಷ್ಟ್ರೀಯ ಕಿಸಾನ್ ಸಂಘಟನೆಯ ಹಲವು ಸಭೆಗಳಲ್ಲಿ ಭಾಗವಹಿಸಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ್ದ ಅವರಿಗೆ ಪ್ರಸ್ತುತ 83 ವರ್ಷ ವಯಸ್ಸಾಗಿತ್ತು. ಸುಧೀರ್ಘ 55 ವರ್ಷ ವಕೀಲ ವೃತ್ತಿ ನಡೆಸಿದ್ದರು.
ತಮ್ಮ ಸ್ವಗ್ರಾಮ ಮುಡಬೋಳದ ರೈತರನ್ನ ಒಗ್ಗೂಡಿಸಿ ರೈತರಿಂದ ಕೆರೆ ಹೂಳು ಎತ್ತಿಸಿ ನೀರಿನ ಸಂಗ್ರಹಣಾ ಮಟ್ಟ ಹೆಚ್ಚಿಸಿ ಕೆರೆಯನ್ನು ಉಳಿಸಿದ ಕೀರ್ತಿ ಸಲ್ಲುತ್ತದೆ. ಅಲ್ಲದೆ ಈ ಕುರಿತು ಎಲ್ಲಾ ಮಾಧ್ಯಮಗಳು ಅಂದು ರಾಜ್ಯಮಟ್ಟದಲ್ಲಿ ಸುದ್ದಿ ಬಿತ್ತರಿಸಿದ್ದವು. ಇಂದಿಗೂ ಕೆರೆ ಮತ್ತು ಗ್ರಾಮಕ್ಕೆ ನೀರಿನ ಕೊರತೆ ಯಾಗಿಲ್ಲ... ಗ್ರಾಮದವರು ಅವರನ್ನ. ಭಗಿರಥ ಎಂದೆ ಕರೆದದ್ದುಂಟು.
ರೈತ ಆತ್ಮಹತ್ಯೆ ಕುರಿತು ತೀರಾ ಬೇಸರವಿತ್ತು ಅವರಲ್ಲಿ. ದೋರನಹಳ್ಳಿ ಭೀಮರಾಯ ಸುರಪುರ ರೈತ ಕುಟುಂಬ ಆತ್ಮಹತ್ಯೆ ಕುರಿತು ತೀರಾ ನೋವು ವ್ಯಕ್ತಪಡಿಸಿದ್ದ ಅವರು ಘಟನೆಯ ಬಗ್ಗೆ ಆಳದ ಸ್ವಯಂ ತನಿಖೆ ನಡೆಸಿದ್ದರು.