ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹುಚ್ಚುಲುಗನ ಭಯಂಕರ ಪ್ರಣಾಳಿಕೆ

02:45 AM Apr 19, 2024 IST | Samyukta Karnataka

ಕಳೆದ ಸಲ ಗ್ಯಾರಂಟಿ ಅನ್ಕೊಂಡ ಅನಕೊಂಡು ಕೈ ನವರು ಕುರ್ಚಿ ಹಿಡಿದರು. ಅಲಾ ಇವನ ಈ ಐಡಿಯಾ ನಮಗ ಮೊದಲೇನೆ ಹೊಳದಿತ್ತು ಅಂದ್ರ ನಾವೂನೂ ಗ್ಯಾರಂಟಿ ಅಂತಿದ್ವಿ ಎಂದು ಕಮಲದವರು ಹಲುಬಿದರು. ಸೋದಿ ಮಾಮಾರು ಅಲ್ರೋ ನಿಮಗ ಮೂರು ಶಬ್ದದ ಗ್ಯಾರಂಟಿ ಅನ್ನೋದಕ್ಕೆ ಯಾಕೆ ಆಗಲಿಲ್ಲ ಎಂದು ಎಲ್ಲರನ್ನೂ ಸಾಲಿಡಿದು ನಿಲ್ಲಿಸಿ ಮಕಮಕ ಅಂದರು.
ಈ ಚುನಾವಣೆಯಲ್ಲಿ ಕೈ ಮತ್ತು ಕಮಲದವರು ನಾವು ಗ್ಯಾರಂಟಿ… ನೀವು ಗ್ಯಾರಂಟಿ ಅಂತ ಸ್ಪರ್ಧೆಗೆ ಬಿದ್ದಿದ್ದಾರೆ. ಗ್ಯಾರಂಟಿ ಎಂಬ ಮೂರಕ್ಷರದಲ್ಲಿ ಅದೆಷ್ಟು ಪವರ್ ಇದೆ ಅಂದುಕೊಂಡ ಹುಚ್ಚುಲುಗ ಗ್ಯಾರಂಟಿ ಎಂಬ ಪಕ್ಷವನ್ನು ರಿಜಿಸ್ಟರ್ ಮಾಡಿಸಿದ. ನನ್ನ ಪಕ್ಷದಲ್ಲಿ ಹೆಣ್ಣುಮಕ್ಕಳಿಗೆ ಆದ್ಯತೆ ನೀಡುತ್ತೇನೆ ಅಂದುಕೊಂಡು.. ೨೭ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳಿಗೆ ಟಿಕೆಟ್ ಕೊಟ್ಟು ತಾನು ಒಂದು ಕ್ಷೇತ್ರದಲ್ಲಿ ಸ್ರರ್ಧಿಸಿದ. ರಾಮನವಮಿಯಂದು ತನ್ನ ಪಕ್ಷದ ಪ್ರಾಣಾಳಿಕೆ ಬಿಡುಗಡೆ ಮಾಡಿದ.
ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು….
೧) ಪ್ರತಿಯೊಂದು ಮನೆಯ ಇಬ್ಬರಿಗೆ ದೊಡ್ಡ ನೌಕರಿ…
೨) ಮನೆಯ ಯಜಮಾನತಿಗೆ… ಇಬ್ಬರು ಅಡುಗೆ ಮಾಡುವವರು… ಒಬ್ಬರು ಕೆಲಸದವರನ್ನು ಕೊಡಲಾಗುವುದು..
೩) ಗಂಡನ ಕಡೆ ಕಡೆಯಿಂದ ಹೇಗೆ ಕೆಲಸ ಮಾಡಿಸಬೇಕು ಎಂದು ಮೂರು ತಿಂಗಳು ತರಬೇತಿ ನೀಡಲಾಗುವುದು…
೪) ಪತಿ ಜಗಳ ತೆಗೆದರೆ ಆತನನ್ನು ಹೆದರಿಸಲು ಗಟ್ಟಿಮುಟ್ಟಾಗಿ ಮಾಡಿಸಿದ ಫೈಬರ್ ಕೋಲು ಕೊಡಲಾಗುವುದು.
೫) ನೊಂದ ಗಂಡಂದಿರಿಗೂ ವಿಶೇಷ ತರಬೇತಿ ಮತ್ತು ಅವರಿಗೆ ಬೇರೆ ಕಡೆ ವಸತಿ ಸೌಲಭ್ಯ ಕಲ್ಪಿಸಲಾಗುವುದು.
೬) ಹಬ್ಬ-ಹುಣ್ಣಿಮೆಯಂದು ಗುಡಿಗುಂಡಾರದಲ್ಲಿ ಪುಗಸಟ್ಟೆ ಊಟ ಕೊಡಲಾಗುವುದು.

Next Article