ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹುಬ್ಬಳ್ಳಿ ಮತ್ತು ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳ ಅವಧಿ ವಿಸ್ತರಣೆ

07:38 PM Nov 11, 2024 IST | Samyukta Karnataka

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಹಾಗೂ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ (ರೈಲು ಸಂಖ್ಯೆ 07339/07340) ರೈಲುಗಳ ಅವಧಿಯನ್ನು ಈಗಿರುವ ನಿಲುಗಡೆ ಮತ್ತು ಸಮಯದೊಂದಿಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ವಿವರಗಳು ಈ ಕೆಳಗಿನಂತಿವೆ:
ಹುಬ್ಬಳ್ಳಿಯ ಎಸ್ಎಸ್ಎಸ್ ಹುಬ್ಬಳ್ಳಿ- ಬೆಂಗಳೂರಿನ ಕೆಎಸ್ಆರ್ ರೈಲ್ವೆ (ರೈಲು ಸಂಖ್ಯೆ - 07339 )
ಪ್ರತಿ ದಿನ (ಡೈಲಿ) ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಈ ಮೊದಲು ಡಿಸೆಂಬರ್ 31, 2024 ರವರೆಗೆ ಓಡಿಸಲು ನಿಗದಿಪಡಿಸಲಾಗಿತ್ತು. ಈಗ ಜನವರಿ 1, 2025 ರಿಂದ ಜೂನ್ 30, 2025 ರವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣ - ಹುಬ್ಬಳ್ಳಿ ಎಸ್ಎಸ್ಎಸ್ ರೈಲ್ವೆ ನಿಲ್ದಾಣಗಳ ನಡುವೆ ಡೈಲಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ( ರೈಲು ಸಂಖ್ಯೆ - 07340 ) ವಿಶೇಷ ರೈಲು ಸೇವೆ ಈ ಮೊದಲು ಜನವರಿ 1, 2025 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು, ಈಗ ಜನವರಿ 2, 2025 ರಿಂದ ಜುಲೈ 1, 2025 ರವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

Tags :
#ರೈಲು#ಹುಬ್ಬಳ್ಳಿ
Next Article