ಹುಬ್ಬಳ್ಳಿ: ಮಾರ್ಗ ಬದಲಾವಣೆ
ಪೈಪ್‌ಲೈನ್ ಜೋಡಣೆ ಕಾಮಗಾರಿ: ಮೂರು ವಾರ ವಾಹನ ಸಂಚಾರ ಮಾರ್ಗ ಬದಲಾವಣೆ
ಹುಬ್ಬಳ್ಳಿ : ಹೊಸೂರು ಶಕುಂತಲಾ ಆಸ್ಪತ್ರೆಯ ಮುಂದೆ ಪೈಪ್ ಲೈನ್ ಆಳವಡಿಸುವ ಕಾಮಗಾರಿಯನ್ನು ನವೆಂಬರ್ 17 ರಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಪ್ರಾರಂಭಿಸುತ್ತಿರುವುದರಿಂದ ಶಕುಂತಲಾ ಆಸ್ಪತ್ರೆಯ ಮುಂದಿನ ರಸ್ತೆಯ ಸಂಚಾರದ ಮಾರ್ಗವನ್ನು ಮೂರು ವಾರಗಳವರೆಗೆ ನಿರ್ಭಂಧಿಸಿ, ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ವಾಹನ ಸಂಚಾರ ಬದಲಾವಣೆ ಮಾರ್ಗಗಳು
ಹೊಸೂರು ವಾಣಿವಿಲಾಸ ಸರ್ಕಲ್ [ಹನಮಂತ ದೇವರ ಗುಡಿ ವೃತ್ತ) ಮುಖಾಂತರ ಹೊಸೂರು ಬಸ್ ಟರ್ಮಿನಲ್, ಬಾಲಾಜಿ ಆಸ್ಪತ್ರೆ, ಹೊಸ ಕೋರ್ಟ್, ಶಿರೂರ ಪಾರ್ಕ್ ಕಡೆಗೆ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ.
ಹೊಸೂರು ಬಸ್ ಟರ್ಮಿನಲ್‌ದಿಂದ ಹೊರಡುವ ಬಸ್‌ಗಳು, ಹೊಸ ಕೋರ್ಟ್ ಪಕ್ಕದ ರಸ್ತೆಯನ್ನು ಉಪಯೋಗಿಸಿಕೊಂಡು ಗೋಕುಲ್ ರೋಡ್‌ನ ಮಾಪ್ಪಲ್ ಡಿಪೋ ಮುಖಾಂತರ ಸಂಚರಿಸಬಹುದು.
ಹೊಸೂರು ಬಸ್ ನಿಲ್ದಾಣಕ್ಕೆ ಬೇರೆ ಬೇರೆ ಊರುಗಳಿಂದ ಹೋಗುವ ಬಸ್‌ಗಳು ಕಡ್ಡಾಯವಾಗಿ ಹೊಸೂರು ಸರ್ಕಲ್ ಗೆ ಬಂದು ಅಲ್ಲಿಂದ ಹೊಸೂರು ಬಸ್ ನಿಲ್ದಾಣಕ್ಕೆ ಹೋಗುವುದು.
ಹೊಸೂರು ವಾಣಿವಿಲಾಸ ಸರ್ಕಲ್ [ಹನಮಂತ ದೇವರ ಗುಡಿ ವೃತ್ತ) ದಿಂದ ಹೊಸ ಕೋರ್ಟ್, ಬಾಲಾಜಿ ಆಸ್ಪತ್ರೆ, ಶಿರೂರ ಪಾರ್ಕ್‌ಗೆ ಹೋಗುವ ಸಾರ್ವಜನಿಕರು ಹೊಸೂರು ಸರ್ಕಲ್, ಮಹಿಳಾ ವಿದ್ಯಾಪೀಠ ವೃತ್ತದಿಂದ ಸಂಚರಿಸಬಹುದು.
ಧಾರವಾಡ ಕಡೆಯಿಂದ, ಉಣಕಲ್ ಕ್ರಾಸ್ ಕಡೆಯಿಂದ, ಶಿರೂರ ಪಾರ್ಕ್ ಕಡೆಯಿಂದ ಶಕುಂತಲಾ ಆಸ್ಪತ್ರೆ, ಹೊಸೂರು ವಾಣಿವಿಲಾಸ ಸರ್ಕಲ್ [ಹನಮಂತ ದೇವರ ಗುಡಿ ವೃತ್ತ) ಕ್ಕೆ ಬರುವ ಎಲ್ಲಾ ವಾಹನಗಳು, ಶಿರೂರ ಪಾರ್ಕ್ ವೃತ್ತ, ಹಳೇ ಪಿ. ಬಿ. ರೋಡ್ ಹೊಸೂರು ವೃತ್ತದ ಮುಖಾಂತರ ಅಥವಾ ಶಿರೂರ ಪಾರ್ಕ್, ಸಿದ್ದೇಶ್ವರ ಪಾರ್ಕ್ ಮುಖಾಂತರ ಸಂಚರಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.