For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿ ವಿಮಾನ ನಿಲ್ದಾಣ ನೂತನ ನಿರ್ದೇಶಕರಾಗಿ ರೂಪೇಶ್‌ಕುಮಾರ ನೇಮಕ

airport
09:37 PM Feb 21, 2024 IST | Samyukta Karnataka
ಹುಬ್ಬಳ್ಳಿ ವಿಮಾನ ನಿಲ್ದಾಣ ನೂತನ ನಿರ್ದೇಶಕರಾಗಿ ರೂಪೇಶ್‌ಕುಮಾರ ನೇಮಕ

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನೂತನ ನಿರ್ದೇಶಕರಾಗಿ ರೂಪೇಶ್‌ಕುಮಾರ ಲೋಹಾನಿ ಅವರನ್ನು ನೇಮಕ ಮಾಡಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಆದೇಶ ಹೊರಡಿಸಿದೆ.
ರೂಪೇಶ್‌ಕುಮಾರ್ ಲೋಹಾನಿ ಅವರು ಪ್ರಸ್ತುತ ಸೂರತ್ ವಿಮಾನ ನಿಲ್ದಾಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಿದೆ.
ರೂಪೇಶ್‌ಕುಮಾರ್ ಅವರು ಈ ಮೊದಲು ೨೦೨೦ ರಿಂದ ೨೨ರವರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೇ ವಾಯುಯಾನ ಸಂಚಾರ ನಿಯಂತ್ರಕರಾಗಿ(ಎಟಿಸಿ) ಕಾರ್ಯನಿರ್ವಹಿಸಿದ್ದರು. ಎರಡು ವರ್ಷಗಳ ಹಿಂದೆ ಸೂರತ್ ವಿಮಾನ ನಿಲ್ದಾಣ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಸೂರತ್ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನದ ಮೂಲಕ ಗಮನ ಸೆಳೆದಿದ್ದರು. ಅವರ ಕಾರ್ಯಕ್ಷಮತೆ ಗಮನಿಸಿ ಪ್ರಾಧಿಕಾರವು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮೋದಕುಮಾರ್ ಠಾಕರೆ ಅವರು ವರ್ಗಾವಣೆಗೊಂಡ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪೂರ್ಣಪ್ರಮಾಣದ ನಿರ್ದೇಶಕರ ನೇಮಕ ಆಗಿರಲಿಲ್ಲ. ಈಗ ರೂಪೇಶ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.