ಹೆಬ್ಬಾಳೆ ಸೇತುವೆ ಮೇಲೆ ಕೊಚ್ಚಿ ಹೋದ ರಾಸು
ಚಿಕ್ಕಮಗಳೂರು: ಭಾರಿ ಮಳೆಯು ಸಾವು-ನೋವಿಗೆ ಕಾರಣವಾಗುತ್ತಿದೆ. ಅಬ್ಬರಿಸುತ್ತಿರುವ ಮಳೆಗೆ ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕಮಗಳೂರಿನ ಹೆಬ್ಬಾಳೆ ಸೇತುವೆ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗುವಾಗ ರಾಸುವೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಹೆಬ್ಬಾಳೆ ಸೇತುವೆ ಮೇಲೆ ೨-೩ ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ದಡ ತುಸು ದೂರದಲ್ಲೇ ಇದ್ದಾಗ ನದಿಗೆ ದನವೊಂದು ಬಿದ್ದಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನಿಂದ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆಯಲ್ಲಿ, ಜನರ ಕಣ್ಣೇದುರೇ ಭದ್ರೆಯ ಒಡಲಲ್ಲಿ ರಾಸು ಕೊಚ್ಚಿ ಹೋಗಿದೆ.
ಮಲೆನಾಡಿನಲ್ಲಿ ಹರಿಯುವ ಸಣ್ಣ ಸಣ್ಣ ಹಳ್ಳಗಳು ಜಲಪಾತದಂತೆ ಬೋರ್ಗರೆ ಯುತ್ತಿವೆ. ಮೂಡಿಗೆರೆ ತಾಲೂಕಿನ ಹಬ್ಬಿಹಳ್ಳ ಜಲಪಾತದ ರೂಪ ಪಡೆದುಕೊಂಡು ಹಾಲ್ನೋರೆಯಂತೆ ಧುಮ್ಮಿ ಕ್ಕುತ್ತಿದೆ. ಗುರುವಾರ ರಾತ್ರಿಯಿಂದ ಬಿಡುವು ನೀಡಿದ್ದ ವರುಣ ಚಿಕ್ಕಮಗಳೂರು ಸುತ್ತಮುತ್ತ ಮತ್ತೇ ಆರ್ಭಟಿಸಲು ಶುರುಮಾಡಿದ್ದಾನೆ.
ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲೂ ಮಳೆಯಾಗುತ್ತಿದೆ. ಒಟ್ಟಾರೆ ಆರ್ಭಟಿಸುತ್ತಿರುವ ಮಳೆಗೆ ಜಿಲ್ಲೆಯ ಜನರು ಸುಸ್ತಾಗಿದ್ದಾರೆ. ಮಳೆ ನಿಲ್ಲುವಂತೆ ವರುಣ ದೇವನಿಗೆ ಕೈಮುಗಿಯುತ್ತಿದ್ದಾರೆ.