ಹೈ ವಿಭಾಗೀಯ ಪೀಠದಿಂದ ಕನ್ನಡದಲ್ಲಿ ಮೊದಲ ತೀರ್ಪು
ಬೆಂಗಳೂರು: ಹಲವು ಹೊಸತುಗಳಿಗೆ, ಪರಿವರ್ತನೆ ಗಳಿಗೆ ಹಾಗೂ ಕಕ್ಷಿದಾರ ಸ್ನೇಹಿ ನಿಲುವುಗಳಿಗೆ ಹೆಸರಾದ ಕರ್ನಾಟಕ ಹೈಕೋರ್ಟ್ ಭಾರತೀಯ ಭಾಷಾದಿನದ ಅಂಗವಾಗಿ ಗುರುವಾರ ಕನ್ನಡದಲ್ಲೇ ಲಿಖಿತ ಹಾಗೂ ಮೌಖಿಕವಾಗಿ ತೀರ್ಪು ಪ್ರಕಟಿಸುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.
ತುಮಕೂರು ಜಿಲ್ಲಾ ಸಿರಾ ತಾಲೂಕಿನ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ನಂಜಾವ ಧೂತ ಸ್ವಾಮೀಜಿ ಸಲ್ಲಿಸಿದ್ದ ಮೂಲ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ಪುರಸ್ಕರಿಸಿದ ತೀರ್ಪನ್ನು ನ್ಯಾಯಾ ಧೀಶರಾದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಹಾಗೂ ಸಿ.ಎಂ.ಜೋಶಿ ಅವರಿದ್ದ ವಿಭಾ ಗೀಯ ಪೀಠವು ಲಿಖಿತವಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಿತಲ್ಲದೇ ನ್ಯಾಯಾಲಯದ ಸಭಾಂಗಣದಲ್ಲಿ ಮೌಖಿಕ ವಾಗಿಯೂ ಪ್ರಕಟಿಸಿತು.
ತೀರ್ಪು ಪ್ರಕಟಿಸುವ ಮುನ್ನ ಕನ್ನಡ ದಲ್ಲೇ ತೀರ್ಪು ಬರೆಯುವ ಮತ್ತು ಮೌಖಿಕ ಪ್ರಕಟಣೆಯ ಮಹತ್ವವನ್ನು ಉಲ್ಲೇಖಿಸಿದ ನ್ಯಾ. ದೀಕ್ಷಿತ್ ಅವರು ರಾಷ್ಟçಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಬಂಗಾಳಿ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಪ್ರಸ್ತಾಪಿ ಸುತ್ತ, “ನಮ್ಮ ಮಾತೃಭಾಷೆ ಕನ್ನಡವು ಕ್ರಮೇಣ ನಶಿಸಿ ಹೋಗಬಾರದು, ನ್ಯಾಯಾಂಗವೂ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳ ದೈನಂದಿನ ಕೆಲಸದಲ್ಲಿ ಕನ್ನಡಕ್ಕೆ ಮಾನ್ಯತೆ ಸಿಗಬೇಕು” ಎಂದು ಪ್ರತಿಪಾದಿಸಿದರು.
“ಡಿಸೆಂಬರ್ ೧೧ರಂದು ಭಾರತ ಭಾಷಾ ದಿನವಾದ ಹಿನ್ನೆಲೆಯಲ್ಲಿ ಇಂದು ಕನ್ನಡದಲ್ಲಿ ಆದೇಶ ಮಾಡುತ್ತಿದ್ದೇವೆ.