For the best experience, open
https://m.samyuktakarnataka.in
on your mobile browser.

೧೨ರಿಂದ ಕೂಡಲಸಂಗಮದಲ್ಲಿ ಶರಣ ಮೇಳ

09:22 PM Jan 09, 2025 IST | Samyukta Karnataka
೧೨ರಿಂದ ಕೂಡಲಸಂಗಮದಲ್ಲಿ ಶರಣ ಮೇಳ

ಬಾಗಲಕೋಟೆ: ಕೂಡಲಸಂಗಮದಲ್ಲಿ ಜ. ೧೨ರಿಂದ ೧೪ರ ವರೆಗೆ ೩೮ನೇ ಶರಣ ಮೇಳ ನಡೆಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸ್ವಾಮಿ ಲಿಂಗಾನಂದ ಪ್ರಶಸ್ತಿಯನ್ನು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರಿಗೆ ಕೊಡಮಾಡಲಾಗುತ್ತಿದೆ ಎಂದು ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಪ್ರಕಟಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೨ ರಂದು ಬೆಳಗ್ಗೆ ೧೦.೩೦ಕ್ಕೆ ರಾಷ್ಟ್ರೀಯ ಬಸವದಳದ ೩೪ನೇ ಅಧಿವೇಶನವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಮೂರು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿದ್ದು, ಹಲವು ಪ್ರಮುಖರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶರಣ ಮೇಳದಲ್ಲಿ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ, ವೈದ್ಯರತ್ನ ಪ್ರಶಸ್ತಿಯನ್ನು ಇಳಕಲ್ಲಿನ ಹೃದ್ರೋಗ ತಜ್ಞ ಡಾ.ಮಹಾಂತೇಶ ಕಡಪಟ್ಟಿ ಅವರಿಗೆ ಹಾಗೂ ೨೦೨೫ರ ಬಸಸವಾತ್ಮಜೆ ಪ್ರಶಸ್ತಿಯನ್ನು ಕಲಬುಗಿರ್ಯ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕೊಡಮಾಡಲಾಗುತ್ತಿದೆ. ೨೦೨೫ರ ರಾಜ್ಯ್ಯಮಟ್ಟದ ದಾಸೋಹ ರತ್ನ ಪ್ರಶಸ್ತಿಯನ್ನು ಕೂಡಲಸಂಗಮದ ಹಿರಿಯ ಸಹಕಾರಿ ಧುರೀಣ ಎಲ್.ಎಂ.ಪಾಟೀಲ ಅವರಿಗೆ, ಶರಣ ರತ್ನ ಪ್ರಶಸ್ತಿಯನ್ನು ಗೋಕಾಕದ ಕಮಲಕ್ಕ ಚೌಧರಿ ಅವರಿಗೆ, ಸಂಸ್ಕಾರ ರತ್ನ ಪ್ರಶಸ್ತಿಯನ್ನು ಬೀದರಿನ ಸುರೇಶಸ್ವಾಮಿ ಅವರಿಗೆ, ಸೇವಾ ರತ್ನ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲೆ ಗುಳೆ ಗ್ರಾಮದ ಬಸವನಗೌಡ ಪಾಟೀಲ ಅವರಿಗೆ, ಒಕ್ಕಲಿಗ ಮುದ್ದಣ್ಣನ ಸ್ಮಣಾರ್ಥ ಪ್ರಶಸ್ತಿಯನ್ನು ಚಿತ್ರದುರ್ಗ ರೈತ ಮುಖಂಡ ಬಸವ ರೆಡ್ಡಿ ಅವರಿಗೆ ಹಾಗೂ ಕಾಯಕ ಕಲಿ ಪ್ರಶಸ್ತಿಯನ್ನು ನಂಜನಗೂಡಿನ ಬಸವಯೋಗೇಶ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ವಿವರಿಸಿದರು.