For the best experience, open
https://m.samyuktakarnataka.in
on your mobile browser.

೧೨೦೦ ಕೋಟಿ ಇರುವವರು ಉಭಯ ಪಕ್ಷದಲ್ಲಿದ್ದಾರೆ

06:12 PM Sep 29, 2024 IST | Samyukta Karnataka
೧೨೦೦ ಕೋಟಿ ಇರುವವರು ಉಭಯ ಪಕ್ಷದಲ್ಲಿದ್ದಾರೆ

ದಾವಣಗೆರೆ: ನಾನು ಸಿಎಂ ಆಗಬೇಕೆಂದು ೧೨೦೦ ಕೋಟಿ ಇರುವವರು ಕಾಂಗ್ರೆಸ್ ಪಕ್ಷದಲ್ಲೂ ಇದ್ದಾರೆ, ಬಿಜೆಪಿಯಲ್ಲೂ ಇದ್ದಾರೆ. ಬಿಜೆಪಿ ಪಕ್ಷದಲ್ಲಿ ಕುದುರೆ ವ್ಯಾಪಾರವನ್ನು ಒಪ್ಪುವುದಿಲ್ಲ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಸರ್ಜನೆಯಾಗುತ್ತಿದ್ದಂತೆಯೇ ಚುನಾವಣೆ ನಡೆದು, ಪೂರ್ಣ ಬಹುಮತದೊಂದಿಗೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಗ್ಯಾರಂಟಿಯಿಂದಲೇ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಭವಿಷ್ಯ ನುಡಿದರು.
ನಮ್ಮಲ್ಲೂ ದುಡ್ಡು ಇರುವಂತಹ ಕೆಲವರಿಗೆ ಕುದುರೆ ವ್ಯಾಪಾರದ ಆಸೆ ಇರಬಹುದು. ಬಹಳಷ್ಟು ಭ್ರಷ್ಟಾಚಾರದಿಂದ ಮಾಡಿದ ಹಣ ಅಂತಹವರಲ್ಲಿ ಇರಬಹುದು. ಏಕೆಂದರೆ ನೋಟು ಎಣಿಸುವ ಯಂತ್ರಗಳು ಸಿಕ್ಕಿದ್ದೂ ನಿಮಗೆ ಗೊತ್ತಿದೆ. ಕುದುರೆ ವ್ಯಾಪಾರಕ್ಕಂತೂ ನಮ್ಮ ಹೈಕಮಾಂಡ್ ಒಪ್ಪುವುದೂ ಇಲ್ಲ. ಕಾಂಗ್ರೆಸ್ ಸರ್ಕಾರ ವಿಸರ್ಜನೆಯಾದ ನಂತರ ಚುನಾವಣೆ ನಡೆದು ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ನಾನು ಮುಖ್ಯಮಂತ್ರಿ ಆಗಬೇಕು. ಯಾರ ಹೆಸರನ್ನೂ ಪ್ರಸ್ತಾಪಿಸದೇ ಕುಟುಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಯಾವಾಗಲೂ ಒಳ್ಳೆಯ ಸಲಹೆಗಳನ್ನೇ ಕೊಟ್ಟುಕೊಂಡು ಬಂದಿದ್ದೇನೆ. ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೊಡಿ ಅಂತಾನು ಹೇಳಿದ್ದೆ. ರಾಜೀನಾಮೆ ಕೊಡಿ ಅಂತಾ ಸಲಹೆ ಸಹ ಕೊಟ್ಟಿದ್ದೆ. ಸಿದ್ದರಾಮಯ್ಯ ವಿರುದ್ಧ ನಾವೇನೂ ಷಡ್ಯಂತ್ರ ಮಾಡುತ್ತಿಲ್ಲ. ಸಿದ್ದರಾಮಯ್ಯವರ ಮುಡಾ ಹಗರಣದ ದಾಖಲೆಗಳನ್ನು ನೀಡಿ, ಅದನ್ನು ಹೊರ ತೆಗೆದಿದ್ದೇ ಕಾಂಗ್ರೆಸ್ಸಿನವರು ಎಂದು ಅವರು ಆರೋಪಿಸಿದರು.
ಮುಡಾ ಬೆನ್ನಲ್ಲೇ ಇದೀಗ ಅದೇ ಕಾಂಗ್ರೆಸ್ಸಿಗರು ಅರ್ಕಾವತಿ ಅಸ್ರ‍್ರ ಪ್ರಯೋಗಿಸುತ್ತಿದ್ದಾರೆ. ಅರ್ಕಾವತಿಗೆ ಸಂಬಂಧಿಸಿದ ದಾಖಲೆಗಳನ್ನೂ ಅದೇ ಕಾಂಗ್ರೆಸ್ಸಿನವರೇ ಒದಗಿಸುತ್ತಿದ್ದಾರೆ. ನಂತರ ಮಲ್ಲಿಕಾರ್ಜುನ ಖರ್ಗೆಯವರ ೫ ಎಕರೆ ಜಮೀನು ವಿವಾದ ತೆಗೆದಿದ್ದು ಅದೇ ಕಾಂಗ್ರೆಸ್ಸಿಗರು. ಅದೇ ಕಾಂಗ್ರೆಸ್ಸಿನವರು ತಂದು ಕೊಟ್ಟ ದಾಖಲೆಗಳನ್ನು ಹಿಡಿದುಕೊಂಡೇ ನಾವು ಹೇಳಿದ್ದೇವೆ. ಸಿಎಂ ಸೈಟ್‌ಗಳ ಹಗರಣದ ದಾಖಲೆಗಳನ್ನು ಕೊಟ್ಟು, ಮೈಸೂರಿಗೆ ಪಾದಯಾತ್ರೆ ಮಾಡಿಸಿದ್ದೂ ಅದೇ ಕಾಂಗ್ರೆಸ್ಸಿನವರೇ ಎಂದು ಅವರು ದೂರಿದರು.
ಮುಡಾ ವಿಚಾರದಲ್ಲಿ ಹೈಕೋರ್ಟ್ ಹೋದವರು ಯಾರು? ತಾವೇ ತಮ್ಮ ತಲೆ ಮೇಲೆ ಕಲ್ಲು ಹಾಕಿಕೊಂಡವರು ಸಿದ್ದರಾಮಯ್ಯ. ನಮ್ಮ ಒಳ್ಳೆಯ ಸಲಹೆಗಳನ್ನು ಸಿದ್ದರಾಮಯ್ಯ ಕೇಳುವುದಿಲ್ಲ. ಬೇರೆಯವರ ಮಾತನ್ನಷ್ಟೇ ಕೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಹೆಸರು ಈಗ ಓಡಿಸುತ್ತಿದ್ದೀರಿ. ಅದೇ ಕಾಂಗ್ರೆಸ್ಸಿನವರೇ ಖರ್ಗೆಯವರ ೫ ಎಕರೆ ಜಾಗದ ದಾಖಲೆಗಳನ್ನೂ ತಂದು ಕೊಟ್ಟಿದ್ದಾರೆ. ಕಾಂಗ್ರೆಸ್ಸಿನವರೇ ಕೊಟ್ಟ ದಾಖಲೆಗಳನ್ನು ಹಿಡಿದುಕೊಂಡು ನಾವು ಮಾತನಾಡಿದ್ದೇವವಷ್ಟೇ. ಪಾದಯಾತ್ರೆ ಮಾಡಿಸಿದ್ದೂ ಅದೇ ಕಾಂಗ್ರೆಸ್ಸಿನವರು ಎಂದು ಅವರು ಟೀಕಿಸಿದರು.
ಹೈಕೋರ್ಟ್ ಹೋಗದೇ ಇದ್ದಿದ್ದರೂ ಪ್ರಾಸಿಕ್ಯೂಷನ್ ಆಗುತ್ತಿತ್ತು. ಎಫ್‌ಐಆರ್ ದಾಖಲಾಗುತ್ತಿತ್ತು. ಈಗ ತಾವೇ ತಲೆ ಮೇಲೆ ಕಲ್ಲು ಎಳೆದುಕೊಂಡಂತಾಗಿದೆ ಸಿದ್ದರಾಮಯ್ಯನವರ ಪರಿಸ್ಥಿತಿ. ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಕೆಳೆಗಿಳಿಸುವ ಕೆಲಸ ಕಾಂಗ್ರೆಸ್ಸಿನವರಿಂದಲೇ ಆಗುತ್ತಿದೆ. ಸಿದ್ದರಾಮಯ್ಯ ಹಿಂದೆ ಇದ್ದವರೇ ಈಗ ತಾವೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಕುಟುಕಿದರು.

Tags :