ಗಾಂಜಾ ಕುಳಗಳ ಬಂಧನ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸ್ ಕಮೀಷನರೇಟ್, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ, ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೧೭ ಜನ ಗಾಂಜಾ ಮಾರಾಟಗಾರರು ಹಾಗೂ ಸೇವನೆ ಮಾಡುವವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೯ ಹಾಗೂ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೮ ಜನರನ್ನು ಬಂಧಿಸಲಾಗಿದೆ ಎಂದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರದ ಕುಷ್ಠರೋಗ ಆಸ್ಪತ್ರೆ ಬಳಿ ೯ ಜನ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೇಳೆ ಮೀರಜ್‌ನ ಆಸ್ಪಕ ಮುಲ್ಲಾ, ಹಳೇ ಹುಬ್ಬಳ್ಳಿಯ ಶಿವಕುಮಾರ ತುಮಕೂರ, ಇಕ್ಬಾಲ್ ಅಹ್ಮದ್ ಸಾಹೇಬ್ ಮುದಗಲ್, ಆರೀಫ್ ಗಲಗಲಿ, ಅಮೃತ ಹವಳದ, ಮೊಹಮ್ಮದ್‌ರೆಹಾನ್ ಗೋಕಾಕ, ಸಾಧಿಕ್ ಕಿತಾಬವಾಲೆ, ಮೆಹಬೂಬಸಾಬ್ ಮಕಾಂದಾರ್, ಅಭಿಷೇಕ ಹವಳದ ಎಂಬುವವರನ್ನು ಬಂಧಿಸಲಾಗಿದೆ.ಬಂಧಿತರಿಂದ ೧.೨೫ ಲಕ್ಷ ರೂ. ಮೌಲ್ಯದ ೧,೫೦೦ ಗ್ರಾಂ ಗಾಂಜಾ, ೬೦ ಸಾವಿರ ರೂ. ಮೌಲ್ಯದ ಆರು ಮೊಬೈಲ್‌ಗಳನ್ನು ಹಾಗೂ ಎರಡು ಸಾವಿರ ರೂ. ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.