ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

೨೦ರಂದು ಸಿದ್ಧಾರೂಢಮಠದಲ್ಲಿ `ಜಲರಥೋತ್ಸವ'

08:11 PM Aug 14, 2024 IST | Samyukta Karnataka

ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢರ ೯೫ನೇ ಪುಣ್ಯಾರಾಧನೆಯ ಅಂಗವಾಗಿ ಆಗಸ್ಟ್ ೨೦ರಂದು ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ೫ ಗಂಟೆಗೆ ಶ್ರೀಮಠದ ಆವರಣದಲ್ಲಿನ ಹೊಂಡದಲ್ಲಿ ಜಲರಥೋತ್ಸವ(ತೆಪ್ಪೋತ್ಸವ) ನಡೆಯಲಿದೆ ಎಂದು ಶ್ರೀ ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸವರಾಜ ಸಿ ಕಲ್ಯಾಣ ಶೆಟ್ಟರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವದಲ್ಲಿ ೫೦ ರಿಂದ ೬೦ ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಕ್ತರಿಗೆ ದರ್ಶನ, ಪ್ರಸಾದ, ಜಲರಥೋತ್ಸವ ವೀಕ್ಷಣೆಗೆ, ವಸತಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಹಾಗೂ ರಾಜ್ಯದ ಕಲಬುರ್ಗಿ, ಬೆಳಗಾವಿ, ಬಳ್ಳಾರಿ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಆ. ೨೦ರಂದು ಶ್ರೀ ಸಿದ್ಧಾರೂಢರ ಪಾಲಕಿಯು ವಾದ್ಯ ಮೇಳದೊಂದಿಗೆ ನಗರದಲ್ಲಿ ಸಂಚರಿಸಿ ಬಂದ ನಂತರ ಸಂಜೆ ಜಲರಥೋತ್ಸವ ನಡೆಯಲಿದೆ ಎಂದು ಹೇಳಿದರು.
ಈ ಉತ್ಸವದ ಅಂಗವಾಗಿ ಆಗಸ್ಟ್ ೧೪ರಿಂದ ೨೦ರವರೆಗೆ ಪ್ರತಿ ದಿನ ಬೆಳಿಗ್ಗೆ ೭.೪೫ ರಿಂದ ೯ ರವರೆಗೆ ಶ್ರೀಮಠದ ಕೈಲಾಸ ಮಂಟಪದಲ್ಲಿ ಶಿವಾನಂದ ಜೋಶಿ ಅವರಿಂದ `ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ' ಪುರಾಣ ಪಠಣ, ೯ ಗಂಟೆಯಿಂದ ೧೨ಗಂಟೆಯವರೆಗೆ ಸ್ವಾಮೀಜಿಗಳು, ಮಹಾತ್ಮರಿಂದ ತತ್ವೋಪದೇಶ ಉಪನ್ಯಾಸಗಳು ನಡೆಯಲಿವೆ. ಪ್ರವಚನಕ್ಕೆ ಆಗಮಿಸುವ ಮಹಾತ್ಮರಿಗೆ, ಮಠಾಧೀಶರಿಗೆ ಶ್ರೀಮಠದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಭಕ್ತರು ಈ ಉತ್ಸವಕ್ಕೆ ಪರಿವಾರ, ಆಪ್ತರೊಂದಿಗೆ ಬಂದು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳವರ ಹಾಗೂ ಸದ್ಗುರು ಶ್ರೀ ಗುರುನಾಥರೂಢಸ್ವಾಮಿಗಳ ಸಮಾಧಿ ದರ್ಶನ ಪಡೆಯಬೇಕು ಎಂದು ಟ್ರಸ್ಟ್ ಕಮೀಟಿಯ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ ಮನವಿ ಮಾಡಿದರು.

Tags :
hubballihublisiddaroodaಸಿದ್ಧಾರೂಢ
Next Article