For the best experience, open
https://m.samyuktakarnataka.in
on your mobile browser.

೨೦೨೪ನೇ ಮಧ್ಯಂತರ ಬಜೆಟ್‌ನ ಪ್ರಮುಖಾಂಶಗಳು‌

02:33 AM Feb 02, 2024 IST | Samyukta Karnataka
೨೦೨೪ನೇ ಮಧ್ಯಂತರ ಬಜೆಟ್‌ನ ಪ್ರಮುಖಾಂಶಗಳು‌

ಸರ್ಕಾರವು ಸಮಗ್ರ ಜಿಡಿಪಿ, ಆಡಳಿತ, ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದೆ.
ಕಳೆದ ೧೦ ವರ್ಷಗಳಲ್ಲಿ ೨೫೦ ಮಿಲಿಯನ್‌ಗೂ ಅಧಿಕ ಮಂದಿಯನ್ನು ನಮ್ಮ ಸರ್ಕಾರ ಬಡತನ ರೇಖೆಯಿಂದ ಹೊರಗಡೆ ತಂದಿದೆ.
ಬೆಳೆ ವಿಮೆ ಯೋಜನೆಯ ಲಾಭ ೪೦ ಮಿಲಿಯನ್ ರೈತರನ್ನು ತಲುಪಲಿದೆ.
ಹಣದುಬ್ಬರವು ನಿಯಂತ್ರಣದಲ್ಲಿದೆ ಮತ್ತು ಆರ್ಥಿಕ ಬೆಳವಣಿಗೆಯು ಏರಿದೆ.
ನಮ್ಮ ಸರ್ಕಾರ ಕೈಗೊಂಡಿರುವ ತೆರಿಗೆ ಸುಧಾರಣೆ ಕ್ರಮಗಳಿಂದ ತೆರಿಗೆ ಮೂಲವು ವಿಸ್ತರಿಸಿದೆ ಮತ್ತು ತೆರಿಗೆ ಸಂಗ್ರಹ ಹೆಚ್ಚಾಗಿದೆ.
ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಅಭೂತಪೂರ್ವ ಆರ್ಥಿಕ ಅಭಿವೃದ್ಧಿ.
ಜಗತ್ತಿನ ಪ್ರಮುಖ ರಾಷ್ಟçಗಳ ನಡುವೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯು ಆಳವಾದ ಪರಿವರ್ತನೆ ಮೂಲಕ ಸಾಗುತ್ತಿದೆ.
೨೦೪೭ರ ವೇಳೆಗೆ ದೇಶವನ್ನು ವಿಕಸಿತ ಭಾರತ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ರಕ್ಷಣಾ ಉದ್ದೇಶಗಳಿಗಾಗಿ ಆಳವಾದ ತಂತ್ರಜ್ಞಾನವನ್ನು ಬಲಪಡಿಸಲು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ.
ಪಿಎಂ ಗತಿಶಕ್ತಿ ಯೋಜನೆಯಡಿ ಖನಿಜ-ಇಂಧನ-ಸಿಮೆಂಟ್ ಕಾರಿಡಾರ್, ಬಂದರು ಸಂಪರ್ಕ ಕಾರಿಡಾರ್, ಹೆವಿ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ ಎಂಬ ಮೂರು ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ೪೦ ಸಾವಿರ ಸಾಮಾನ್ಯ ಬೋಗಿಗಳನ್ನು ವಂದೇ ಭಾರತ್ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಕೆ.
ಮುಂದಿನ ಐದು ವರ್ಷದಲ್ಲಿ ಸರ್ಕಾರ ೨ ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಾಣ ಮಾಡಲಿದೆ ಮತ್ತು ಈಗಾಗಲೇ ೩ ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.
ದೇಶದಲ್ಲಿ ಸ್ವ-ಸಹಾಯ ಗುಂಪುಗಳ ಯಶಸ್ಸು ೧ ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿಗಳಾನ್ನಾಗಿ ಮಾಡಿದ್ದು, ಈಗ ೩ ಕೋಟಿ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿದೆ.
ಹಣಕಾಸು ವರ್ಷ ೨೦೨೪ ವಿತ್ತೀಯ ಕೊರತೆಯು ಜಿಡಿಪಿಯ ೫.೮% ನಲ್ಲಿ ಗುರಿಗಿಂತ ಕಡಿಮೆಯಾಗಿದೆ: ೨೦೨೫ರ ಹಣಕಾಸು ವರ್ಷದಲ್ಲಿ ೫.೧% ಕ್ಕೆ ನಿಗದಿಪಡಿಸಲಾಗಿದೆ ಮತ್ತು ೨೦೨೬ರ ಹಣಕಾಸು ವರ್ಷದ ವೇಳೆಗೆ ಅದನ್ನು ೪.೫% ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.
ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ (ನೇರ ಮತ್ತು ಪರೋಕ್ಷ ತೆರಿಗೆ)
ಸ್ಟಾರ್ಟ್ಅಪ್, ಚಿನ್ನದ ಮೇಲಿನ ಹೂಡಿಕೆಗಳು, ಪಿಂಚಣಿ ನಿಧಿಗಳ ಮೇಲಿನ ತೆರಿಗೆ ಪ್ರಯೋಜನಗಳನ್ನು ಮಾರ್ಚ್ ೨೦೨೫ ರವರೆಗೆ ವಿಸ್ತರಿಸಲಾಗುವುದು.
ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರ ಗಣನೀಯವಾಗಿ ಹೂಡಿಕೆ ಮಾಡಲಿದೆ.
ಇತರ ಖರ್ಚುಗಳಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ, ದೇಶಕ್ಕೆ ಭೇಟಿ ನೀಡುವ ಅತಿಥಿಗಳ ಆತಿಥ್ಯ ಮತ್ತು ಮನರಂಜನೆ, ಸಚಿವರು, ಸಂಪುಟ ಕಾರ್ಯದರ್ಶಿಗಳ ವೆಚ್ಚಗಳಿಗೆ ೧,೨೪೮.೯೧ ಕೋಟಿ ರೂ. ಅನುದಾನ ಮೀಸಲು.