೨೫ ಬೆರಳುಗಳುಳ್ಳ ಅಪರೂಪದ ಮಗು ಜನನ
ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ: ಅತ್ಯಂತ ಅಸಾಮಾನ್ಯ ಪ್ರಕರಣವೆನ್ನುವಂತೆ ೧೨ ಕಾಲ್ಬೆರಳುಗಳು ಮತ್ತು ೧೩ ಕೈ ಬೆರಳುಗಳೊಂದಿಗೆ ನವಜಾತ ಶಿಶು ಜನಿಸಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೩೫ ವರ್ಷದ ತಾಯಿ ಭಾರತಿ ಅವರಿಗೆ ಅಪರೂಪದ ಗಂಡು ಶಿಶು ಜನನವಾಗಿದೆ. ಕುಟುಂಬವು ಸಂತೋಷವಾಗಿದೆ.
ಮಗುವಿನ ಬಲಗೈಗೆ ೬, ಎಡಗೈಗೆ ೭ ಮತ್ತು ಕಾಲಿನಲ್ಲಿ ೬-೬ ಬೆರಳುಗಳಿವೆ. ಶಿಶುವನ್ನು ಕುಟುಂಬವು ದೇವಿಯ ಅವತಾರವೆಂದು ಪರಿಗಣಿಸುತ್ತದೆ.
ಅಪರೂಪದ ಸ್ಥಿತಿಯನ್ನು ನೋಡಿದ ನಂತರ ವೈದ್ಯರು ಆಶ್ಚರ್ಯಚಕಿತರಾದರು. ನವಜಾತ ಶಿಶುವನ್ನು ನೋಡಲು ಅಪಾರ ಜನರು ಜಮಾಯಿಸಿದ್ದರು. ಮಗುವಿನ ಜನನದಿಂದ ಕುಟುಂಬವು ಉತ್ಸುಕವಾಗಿದೆ ಮತ್ತು ಮಗವಿಗೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿಯ ಭುವನೇಶ್ವರಿ ತಾಯಿಯ ಆಶೀರ್ವಾದವಿದೆ ಎಂದು ಮಗುವಿನ ತಂದೆ ಗುರಪ್ಪ ಕೊಣ್ಣೂರ ಹೇಳಿದರು.
'ನನ್ನ ಪತ್ನಿ ಪ್ರತಿ ವಾರ ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಬೇಡಿಕೊಂಡಿದ್ದಳು. ಬೇಡಿಕೆಯ ೪ನೇ ವಾರದಲ್ಲಿಯೇ ಗರ್ಭಿಣಿಯಾಗುವ ಅವಕಾಶ ದೊರಕಿತು. ಅಂಬಲಿ ಪ್ರಸಾದದ ಮಹಿಮೆಯೆಂದು ಗುರಪ್ಪ ಸಂಯುಕ್ತ ಕರ್ನಾಟಕದೊಂದಿಗೆ ಸಂತಸ ಹಂಚಿಕೊಂಡರು.
ಶಸ್ತ್ರಕ್ರಿಯೆ ನಡೆಸಿದ ಪ್ರಸೂತಿ ಹಾಗು ಸ್ತ್ರೀರೋಗ ವೈದ್ಯರಾದ ಡಾ. ಪಾರ್ವತಿ ಹಿರೇಮಠ ಮಾತನಾಡಿ, ಅಪರೂಪದಲ್ಲಿ ಅಪರೂಪವಾಗಿ ಕ್ರೋಮೋಸೋಮ್‌ಗಳಿಂದ ಇಂತಹ ಮಗುವಿನ ಜನನವಾಗುತ್ತದೆ. ೨೫ ಬೆರಳುಗಳನ್ನು ಹೊಂದಿದ ಗಂಡು ಮಗುವಿನೊಂದಿಗೆ ತಾಯಿಯೂ ಕ್ಷೇಮವಾಗಿದ್ದಾಳೆಂದು ತಿಳಿಸಿದರು.