For the best experience, open
https://m.samyuktakarnataka.in
on your mobile browser.

೪೫೦ ಎಂಎಲ್ ರಕ್ತದಿಂದ ಮೂರು ಜನರಿಗೆ ಜೀವ

09:24 PM Aug 25, 2024 IST | Samyukta Karnataka
೪೫೦ ಎಂಎಲ್ ರಕ್ತದಿಂದ ಮೂರು ಜನರಿಗೆ ಜೀವ

ಹುಬ್ಬಳ್ಳಿ: ಒಬ್ಬ ವ್ಯಕ್ತಿ ೪೫೦ ಎಂಎಲ್ ರಕ್ತದಾನ ಮಾಡುವುದರಿಂದ ಮೂರು ಜನರ ಜೀವ ಉಳಿಸಬಹುದು. ಹೀಗಾಗಿ ಹೆಚ್ಚು ಜನ ರಕ್ತದಾನ ಮಾಡಲು ಮುಂದಾಗಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಮುಖ್ಯಸ್ಥರಾದ ದತ್ತಮೂರ್ತಿ ಕುಲಕರ್ಣಿ ಹೇಳಿದರು.
ಆರೋಗ್ಯ ಹಬ್ಬದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುರುಷರು ಮೂರು, ಮಹಿಳೆಯರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಲು ಅವಕಾಶವಿದೆ. ಈಗ ರಕ್ತದಾನಕ್ಕೆ ೧೮ರಿಂದ ೬೫ ವರ್ಷದವರೆಗೂ ಅವಕಾಶವಿದೆ ಎಂದರು.
ರಾಜ್ಯದಲ್ಲಿ ವರ್ಷಕ್ಕೆ ೭ ಲಕ್ಷ ಯುನಿಟ್ ರಕ್ತದ ಬೇಡಿಕೆ ಇದೆ. ಆದರೆ ಸದ್ಯ ಕೇವಲ ೪ ಲಕ್ಷ ಯುನಿಟ್ ರಕ್ತ ಸಂಗ್ರಹವಾಗುತ್ತಿದ್ದು ಇನ್ನೂ ೩ ಲಕ್ಷ ಯುನಿಟ್ ರಕ್ತದ ಅಗತ್ಯವಿದೆ. ಜನ ರಕ್ತದಾನ ಮಾಡಲು ಭಯಪಡುತ್ತಿದ್ದಾರೆ. ಆದರೆ ಯಾರಲ್ಲೂ ಭಯ ಬೇಡ. ರಕ್ತದಾನದಿಂದ ಅನೇಕ ಕಾಯಿಲೆಗಳು ದೂರವಾಗುತ್ತವೆ. ಇದರಿಂದ ಕೆಟ್ಟ ಕೊಲೆಸ್ಟಾçಲ್ ಕೂಡ ದೂರವಾಗುತ್ತದೆ ಎಂದು ತಿಳಿಸಿದರು.
ತಾವು ೭೦ ಬಾರಿ ರಕ್ತದಾನ ಮಾಡಿದ್ದು ಜನ ಕೂಡ ರಕ್ತದಾನ ಮಾಡಲು ಮುಂದೆ ಬರಬೇಕು. ಹುಟ್ಟುಹಬ್ಬ, ವಾರ್ಷಿಕೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ರಕ್ತದಾನ ಮಾಡುವ ಮೂಲಕ ಆಚರಿಸಬೇಕು. ರಾಷ್ಟ್ರೋತ್ಥಾನ ಪರಿಷತ್ ೧೫೦೦ ಯುನಿಟ್ ರಕ್ತ ಸಂಗ್ರಹಿಸುತ್ತಿದ್ದು, ಯಾವುದೇ ಹಣ ಹಾಗೂ ರ‍್ಯಾಯ ರಕ್ತಕ್ಕೆ ಬೇಡಿಕೆ ಇಡದೆ ಎಲ್ಲ ಆಸ್ಪತ್ರೆಗಳಿಗೆ ನೀಡುತ್ತೇವೆ ಎಂದು ತಿಳಿಸಿದರು.