𝟐𝟎𝟐𝟓ರ ವೇಳೆಗೆ ಬೆಂಗಳೂರಿನಲ್ಲಿ ಕೆಇಬಿ ಹಾನಾ ಬ್ಯಾಂಕ್ ಶಾಖೆ ಕಾರ್ಯಾರಂಭ
01:51 PM Jul 04, 2024 IST | Samyukta Karnataka
ಬೆಂಗಳೂರು: ನಗರದಲ್ಲಿ 𝟐𝟎𝟐𝟓ರ ವೇಳೆಗೆ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕೆಇಬಿ ಹಾನಾ ಬ್ಯಾಂಕ್ ಶಾಖೆಯ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಜಾಗತಿಕ ಮನ್ನಣೆ ಗಳಿಸಿರುವ ಬೆಂಗಳೂರಿನಲ್ಲಿ ಶಾಖೆ ತೆರೆಯುವ ಕುರಿತಂತೆ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಕೆಇಬಿ ಹಾನಾ ಬ್ಯಾಂಕ್ ನ ಪ್ರಮುಖರೊಂದಿಗೆ ಮಹತ್ವದ ಮಾತುಕತೆ ನಡೆಸಿದೆ. ಬೆಂಗಳೂರಿನಲ್ಲಿ ಶಾಖೆ ಆರಂಭವಾದರೆ ಭಾರತಕ್ಕೆ ಬರಲಿರುವ ಕೊರಿಯನ್ ಕಂಪೆನಿಗಳಿಗೂ ಪ್ರಯೋಜನಕಾರಿಯಾಗಲಿದೆ ಎಂಬ ಅಂಶವನ್ನು ತಿಳಿಸಿಕೊಡಲಾಯಿತು. ಹಾನಾ ಬ್ಯಾಂಕ್ 2025ರ ವೇಳೆಗೆ ನಗರದಲ್ಲಿ ಶಾಖೆ ಆರಂಭಿಸುವ ಸಲುವಾಗಿ RBIಗೆ ಅನುಮತಿ ಕೋರಿ ಪತ್ರ ಸಲ್ಲಿಸಿದೆ. #HanaBank ಕಾರ್ಯಾಚರಣೆಗಳಿಗೆ ಅನುಮೋದನೆಗಳನ್ನು ಪಡೆಯಲು ಅಗತ್ಯವಿರುವ ಎಲ್ಲ ಬೆಂಬಲ, ಸಹಕಾರ ನೀಡಲಾಗುವುದು ಎಂದಿದ್ದಾರೆ.