20 ವರ್ಷಗಳಿಂದ ರಸ್ತೆ- ಚರಂಡಿ ಇಲ್ಲದ ಗ್ರಾಮ.!
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು, ಬೂಕನಕೆರೆ ಹೋಬಳಿ, ವಿಠಲಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಲಕುಪ್ಪೆ ಗ್ರಾಮದಲ್ಲಿ ಸುಮಾರು 20 ವರ್ಷಗಳಿಂದ ರಸ್ತೆ-ಚರಂಡಿಯನ್ನು ಕಾಣದೇ ಇರುವುದು ಕಂಡುಬಂದಿದೆ, ಅಲ್ಲದೆ ಈ ಗ್ರಾಮಕ್ಕೆ ಯಾವುದೇ ಬಸ್ಸು-ಆಟೋಗಳು ಸಹ ರಸ್ತೆಯಿಲ್ಲದ ಕಾರಣ ಗ್ರಾಮಕ್ಕೆ ಬರಲು ಹಿಂಜರಿಯುತ್ತಾರೆ,
ಅಧಿಕಾರಿಗಳ ನಿರ್ಲಕ್ಷತೆಯಿಂದ ತುಂಬ ಹಿಂದುಳಿದ ಗ್ರಾಮವಾಗಿದೆ ಎಷ್ಟು ಹಲವಾರು ಬಾರಿ ಸರ್ಕಾರಕ್ಕೆ ಗ್ರಾಮಸ್ಥರು ಅರ್ಜಿಯ ಮೂಲಕ ಅಧಿಕಾರಿಗಳನ್ನು ಭೇಟಿಯಾಗಿ ಮಾತನಾಡಿದರು ಸಹ ಯಾವುದೇ ರೀತಿ ಸ್ಪಂದನ ಇಲ್ಲದೆ ಇದರಿಂದ ಹಳ್ಳಿಯ ಜನರು ಬೇಸತ್ತು ಹೋಗಿದ್ದಾರೆ, ಅಲ್ಲದೇ ಸತತ ಮಳೆಯಿಂದಾಗಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದೆ ರಸ್ತೆಯು ಕೆಸರುಗದ್ದೆ ಯಾಗಿದ್ದು ಗ್ರಾಮಸ್ಥರು ನಾಟಿ ಮಾಡುವ ಮೂಲಕ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ
ಸತತ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ,ಮನೆಯಿಂದ ಹೊರಗೆ ಬರಲು ಸಾಧ್ಯವಾಗದೆ ಕೆಲಸಕ್ಕೆ ಹೋಗದೆ ತುಂಬ ತೊಂದರೆ ಆಗಿದೆ ಮಳೆಗಾಲದಲ್ಲಿ ಶಾಲೆ ಮಕ್ಕಳು. ವಯಸ್ಸಾದ ಹಿರಿಯರು. ದನ-ಕರು ಮತ್ತು ಮೇಕೆಗಳು ರಸ್ತೆಯಲ್ಲಿ ಓಡಾಡಲು ಬಹಳ ತೊಂದರೆ ಆಗಿರುತ್ತದೆ ಮತ್ತು ಅನೇಕರು ಬಿದ್ದು ಗಾಯಗಳಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.