2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸುದೀಪ್‌ಗೆ ಅತ್ಯುತ್ತಮ ನಟ ಪ್ರಶಸ್ತಿ
ಅತ್ಯುತ್ತಮ ನಟ: ಸುದೀಪ್, ಅತ್ಯುತ್ತಮ ನಟಿ: ಅನುಪಮಾ ಗೌಡ
ಬೆಂಗಳೂರು: 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ
ಒಟ್ಟು 25 ವಿಭಾಗಗಳಿಗೆ 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ. 24 ಚಿತ್ರರಂಗದ ವಿವಿಧ ವಿಭಾಗಳು ಹಾಗೂ ಒಂದು ತೀರ್ಪುಗಾರರ ವಿಶೇಷ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಒಟ್ಟು 180 ಸಿನಿಮಾಗಳು 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು ನಂಜುಂಡೇಗೌಡ, ನಿರ್ದೇಶಕರು, ನಿರ್ಮಾಪಕರು ಇವರ ಅಧ್ಯಕ್ಷತೆಯಲ್ಲಿ 2019ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳಿಗಾಗಿ ಚಲನಚಿತ್ರಗಳನ್ನು ಆಯ್ಕೆ ಮಾಡಲು ಆಯ್ಕೆ ಸಲಹಾ ಸಮಿತಿಯನ್ನು ರಚಿಸಲಾಗಿತ್ತು. 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 180 ಚಲನಚಿತ್ರಗಳ ಪೈಕಿ, ನಿಯಮಾನುಸಾರ ಇಲ್ಲದಿರುವ 8 ಚಲನಚಿತ್ರಗಳನ್ನು ಹೊರತುಪಡಿಸಿ, 172 ಚಲನಚಿತ್ರಗಳನ್ನು ಮಾತ್ರ ವೀಕ್ಷಿಸಿ, ಆಯ್ಕೆ ಮಾಡಿ ಸಲ್ಲಿಸಿರುವ ವರದಿಯನ್ನು ಅಂಗೀಕರಿಸಿ ಸರ್ಕಾರದ ಆದೇಶವನ್ನು ಹೊರಡಿಸಿದೆ
ಅತ್ಯುತ್ತಮ ನಟ: ಸುದೀಪ್ (ಪೈಲ್ವಾನ್), ಅತ್ಯುತ್ತಮ ನಟಿ: ಅನುಪಮಾ ಗೌಡ (ತ್ರಯಂಬಕಂ), ಅತ್ಯುತ್ತಮ ಮೊದಲ ಚಿತ್ರ: ಮೋಹನದಾಸ (ನಿರ್ದೇಶಕ ಪಿ. ಶೇಷಾದ್ರಿ), ದ್ವಿತೀಯ ಅತ್ಯುತ್ತಮ ಚಿತ್ರ : 'ಲವ್ ಮಾಕ್ಟೇಲ್' (ನಿರ್ದೇಶಕ - ಡಾರ್ಲಿಂಗ್ ಕೃಷ್ಣ), ತೃತೀಯ ಅತ್ಯುತ್ತಮ ಚಿತ್ರ : 'ಅರ್ಥ್ಯಂ' (ನಿರ್ದೇಶಕ - ವೈ ಶ್ರೀನಿವಾಸ್), ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ), ಅತ್ಯುತ್ತಮ ಪೋಷಕ ನಟಿ: ಅನೂಷಾ ಕೃಷ್ಣ (ಬ್ರಾಹ್ಮ), ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ (ನಿರ್ದೇಶಕ - ಮಂಜುನಾಥ್ ಎಸ್), ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ V/S ಇಂಗ್ಲೆಂಡ್ (ನಿರ್ದೇಶಕ - ನಾಗತಿಹಳ್ಳಿ ಚಂದ್ರಶೇಖರ್), ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು (ನಿರ್ದೇಶಕ - ಜಿ. ಅರುಣ್ ಕುಮಾರ್), ಚೊಚ್ಚಲ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ (ನಿರ್ದೇಶಕ - ನಾಗೇಶ್ ಎನ್.), ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ತ್ರಿಬಲ್ ತಲಾಖ್ (ಬ್ಯಾರಿ ಭಾಷೆ) (ನಿರ್ದೇಶಕ - ಯೂಕೂಬ್ ಖಾದರ್ ಗುಲ್ವಾಡಿ), ಅತ್ಯುತ್ತಮ ಕತೆ: ಜಯಂತ್ ಕಾಯ್ಕಿಣಿ, ಚಿತ್ರ ಇಲ್ಲಿರಲಾರೆ ಅಲ್ಲಿ ಹೋಗಲಾರೆ, ಅತ್ಯುತ್ತಮ ಚಿತ್ರಕತೆ: ಡಾರ್ಲಿಂಗ್ ಕೃಷ್ಣ ( ಲವ್ ಮಾಕ್ಟೇಲ್), ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ ಚಿತ್ರ), ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್ ಭಾಸ್ಕರ್, ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ), ಅತ್ಯುತ್ತಮ ಸಂಕಲನ: ಜಿ. ಬಸವರಾಜ್ ಅರಸ್, ಅತ್ಯುತ್ತಮ ಬಾಲ ನಟ: ಮಾಸ್ಟರ್ ಪ್ರೀತಂ ( ಮಿಂಚುಹುಳು, ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ), ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನದಾಸ), ಅತ್ಯುತ್ತಮ ಗೀತ ರಚನೆ: ರಝಾಕ್ ಪುತ್ತೂರು (ಪೆನ್ಸಿಲ್ ಬಾಕ್ಸ್), ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್ ( ಲವ್ ಮಾಕ್ಟೇಲ್), ಅತ್ಯುತ್ತಮ ಹಿನ್ನೆಲೆ ಗಾಯಕಿ: ಜಯದೇವಿ ಜಿಂಗಮ ಶೆಟ್ಟಿ ( ರಾಗಭೈರವಿ ಚಿತ್ರ), ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಚಿತ್ರ ಹಾಗೂ ತಮಟೆ ನರಸಿಂಹಯ್ಯ ಸಿನಿಮಾ, ಅತ್ಯುತ್ತಮ ನಿರ್ವಾಹಕ: ಆರ್. ಗಂಗಾಧರ್ (ಮಕ್ಕಡ್ ಮನಸ್)