1573.48 ಕೋಟಿ ಮೊತ್ತದ ಬಜೆಟ್ ಮಂಡನೆ
250 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ: ಮೇಯರ್, ಉಪಮೇಯರ್ ಕಾರಿಗೆ ೪೦ ಲಕ್ಷ
ಸಿದ್ಧಾರೂಢ ಮಠ, ಶಿವಾನಂದ ಮಠ, ಸಿದ್ದಪ್ಪಜ್ಜನ ಮಠಕ್ಕೆ 1 ಕೋಟಿ
ಹುಬ್ಬಳ್ಳಿ: ಮಹಾನಗರ ಪಾಲಿಕೆ ೨೦೨೪-೨೫ನೇ ಸಾಲಿನಲ್ಲಿ ಒಟ್ಟು ೧೫೭೩.೪೮ ಕೋಟಿ ಮೊತ್ತದ ಬಜೆಟ್ ನ್ನು ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರ ಮಂಡಿಸಿದರು.
ಪಾಲಿಕೆಯ ರಾಜಸ್ವ ಆದಾಯ ೬೦೩ ಕೋಟಿ ಇರಲಿದೆ. ಕೇಂದ್ರ ಮತ್ತು ರಾಜ್ಯ ಅನುದಾನಗಳನ್ನು ಒಳಗೊಂಡಂತೆ ಅನುದಾನ ಸ್ವೀಕೃತಿ ೬೪೩ ಕೋಟಿಯಾಗಿದೆ. ಅಸಾಮಾನ್ಯ ಸ್ವೀಕೃತಿಯಲ್ಲಿ ೧೧೪.೫೧ ಕೋಟಿಯಾಗಿದೆ. ಒಟ್ಟಾರೆ ೧೫೭೩.೩೫ ಕೋಟಿ ಖರ್ಚು ಮಾಡಲಾಗುತ್ತಿದ್ದು, ೧೨.೭೧ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಮಹಾಪೌರರಿಗೆ ಹಾಗೂ ಉಪಾಮಹಾಪೌರರ ವಾಹನ ಖರೀದಿಗೆ ೪೦ ಲಕ್ಷ ಮೀಸಲು, 250 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಣೆ ಗುರಿ.
ಕಸ ಕೊಡಿ ಹಣ ಪಡಿ ಯೋಜನೆ ಮೂಲಕ ೭೫ ಲಕ್ಷ ಆದಾಯ ನಿರೀಕ್ಷೆ ಮಾಡಲಾಗಿದ. ವಿಲಿನಗೊಂಡ ಹಳ್ಳಿಗಳ ಅಭಿವೃದ್ಧಿಗೆ ೭ ಕೋಟಿ. ವಿವಿಧ ಯೋಜನೆಯಿಂದ 544 ಕೋಟಿ ಬಂಡವಾಳ ಸ್ವೀಕೃತಿ ನಿರೀಕ್ಷೆ ಮಾಡಲಾಗಿದೆ. ೧೦೩೭ ಕೋಟಿ ಮೂಲಭೂತ ಸೌಕರ್ಯ ಉನ್ನತಿಕರಿಸಲು ಮೀಸಲಿರಸಲಾಗಿದೆ. ನೃಪತುಂಗ ಬೆಟ್ಟ ಜಿಪ್ ಲೇನ್ ಗೆ ೫ ಕೋಟಿ ಮೀಸಲು. ಸಿದ್ಧಾರೂಢ ಮಠ, ಸಿದ್ದಪ್ಪಜನ ಮಠ, ಶಿವಾನಂದ ಮಠ ಅಭಿವೃದ್ಧಿಗೆ 1 ಕೋಟಿ ಮೀಸಲಿಡಲಾಗಿದೆ. ಕೆರೆಗಳ ಅಭಿವೃದ್ಧಿಗೆ ೩.೫ ಕೋಟಿ ಮೀಸಲು. ಆರೋಗ್ಯ ಇಲಾಖೆಗೆ ೯ ಕೋಟಿ ಮೀಸಲಿಡಲಾಗಿದೆ.ಮಹಿಳೆಯರ ರಕ್ಷಣೆಗಾಗಿ ೧ ಕೋಟಿ ಮೀಸಲು ಇಟ್ಟು ಬಜೆಟ್ ಮಂಡಿಸಲಾಯಿತು.