ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

27 ವರ್ಷಗಳ ನಂತರ ಬಾರ್ಡರ್ ಅಂಚಿನಲ್ಲಿ ಸನ್ನಿ

01:58 PM Jun 13, 2024 IST | Samyukta Karnataka

ಬೆಂಗಳೂರು: 1997ನೇ ಸಾಲಿನ ಜೂನ್ 13 ರಂದು ‘ಬಾರ್ಡರ್’ ನ ದರ್ಶನ ಮಾಡಿಸಿದರು ಸನ್ನಿ ಡಿಯೋಲ್. ಬರೋಬ್ಬರಿ 27 ವರ್ಷಗಳ ನಂತರ ನಟ ಸನ್ನಿ ಡಿಯೋಲ್ ಬಾರ್ಡರ್ 2 ಅನ್ನು ಘೋಷಿಸಿದ್ದಾರೆ.

ಈ ಕುರಿತಂತೆ ಅವರು ಚಿತ್ರದ ಪ್ರಕಟಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬಾರ್ಡರ್ 2 ಎಂಬುದು 1971 ರ ಇಂಡೋ-ಪಾಕಿಸ್ತಾನ ಯುದ್ಧವನ್ನು ಆಧರಿಸಿದ ಜೆಪಿ ದತ್ತಾ ಅವರ 1997ರ ಸಿನಿಮಾದ ಬಾರ್ಡರ್‌ನ ಮುಂದುವರಿದ ಭಾಗವಾಗಿದೆ.

ಜೂನ್ 13, 1997 ರಂದು ಬಾರ್ಡರ್ ಸಿನಿಮಾ ಬಿಡುಗಡೆಯಾಗಿತ್ತು. 27 ವರ್ಷಗಳ ನಂತರ, ಬಾರ್ಡರ್ 2 ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ ದಿಲ್ ಬೋಲೆ ಹಡಿಪ್ಪಾ!, ಜಟ್ & ಜೂಲಿಯೆಟ್ , ಪಂಜಾಬ್ 1984 ಮತ್ತು ಕೇಸರಿ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ಘೋಷಿಸಲಿದೆ.

Next Article