ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

28 ಕ್ಷೇತ್ರ ಗೆಲ್ಲುವಲ್ಲಿ ಯಶಸ್ವಿಯಾಗುತ್ತೇವೆ

01:15 PM Apr 17, 2024 IST | Samyukta Karnataka

ಬೆಳಗಾವಿ: ನಾನು ಈ ಹಿಂದೆ ಹೇಳಿದಂತೆ 28ಕ್ಕೆ 28 ಕ್ಷೇತ್ರ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೆವೆ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆಗೆ ಬಂದಿದ್ದೇವೆ‌. ನಾನು ಬೈರತಿ ಬಸವರಾಜ್, ಲೆಹರ್ ಸಿಂಗ್ ಬಂದಿದ್ದೇವೆ. ಮೆರವಣಿಗೆ ಆರಂಭವಾಗಿದ್ದು ಅವರ ಜೊತೆ ಸೇರಿ ನಾಮಪತ್ರ ಸಲ್ಲಿಸುತ್ತೇ‌ನೆ.
ಇದಾದ ಬಳಿಕ ಕೊಪ್ಪಳಕ್ಕೆ ಹೋಗಬೇಕು. ವಾತಾವರಣ ಎಲ್ಲಾ ಕಡೆಗಳಲ್ಲಿ ಅನಕೂಲಕರವಾಗಿದೆ‌‌. ನಾನು ಈ ಹಿಂದೆ ಹೇಳಿದಂತೆ 28ಕ್ಕೆ 28 ಕ್ಷೇತ್ರ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡ್ತಿದ್ದೇವೆ. ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ ಎಂದರು.

ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಇವತ್ತು ಹೋಗಿ ಅವರನ್ನು ಭೇಟಿಯಾಗಿ ಮಾತನಾಡಬೇಕು ಅಂದುಕೊಂಡಿದ್ದೆ, ಇಂತಹ ಘಟನೆಗಳು ಸ್ವಾಭಾವಿಕ ಎಂದರು

ಬೆಳಗಾವಿಯಲ್ಲಿ ಜಾತಿ ಆಧಾರದಮೇಲೆ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿ ಅವರು ಎನಾದ್ರೂ ಮಾಡಿಕೊಳ್ಳಲಿ, ನಾವು ಹಿಂದೂ, ಮುಸ್ಲಿಂ ಬೇಧ ಭಾವ ಇಲ್ಲ ಎಲ್ಲರ ಬೆಂಬಲದೊಂದಿಗೆ ಗೆಲ್ತೇವಿ ಎಂದರು

Next Article