5555 ಕೆಜಿ ತೂಕದ ನಾಣ್ಯಗಳಿಂದ ಸ್ವಾಮೀಜಿ ತುಲಾಭಾರ
ಹುಬ್ಬಳ್ಳಿ: ಫಕೀರ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ ಕಾರ್ಯಕ್ರಮದ ಅದ್ಧೂರಿಯಾಗಿ ನೆರವೇರಿತು.
ನಗರದ ಪ್ರದೇಶದಲ್ಲಿ ಭವ್ಯ ಮೆರವಣಿಗೆಯ ಮೂಲಕ ನೆಹರೂ ಮೈದಾನ ತಲುಪಿತು. ಅಲ್ಲಿಯೇ ಸಿದ್ದಪಡಿಸಲಾಗಿದ್ದ ಬೃಹತ್ ತಕ್ಕಡಿಯಲ್ಲಿ 5555 ಕೆಜಿ ತೂಕದ ಹತ್ತು ರೂಪಾಯಿ ನಾಣ್ಯಗಳಿಂದ ಆನೆಯ ಸಮೇತವಾಗಿ ಸದ್ಗುರು ಫಕೀರ ಸಿದ್ದರಾಮ ಮಹಾ ಸ್ವಾಮೀಜಿಗಳ ತುಲಾಭಾರ ಮಾಡಲಾಯಿತು. ಇದೇ ವೇಳೆ ಶ್ರೀಗಳಿಗೆ, ಹುಬ್ಬಳ್ಳಿ-ಧಾರವಾಡದ ಭಕ್ತರು ಸನ್ಮಾನಿಸಿ 3ಕೆಜಿ ಚಿನ್ನವನ್ನು ನೀಡಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಶ್ರೀಗಳು, ತಮ್ಮ ಭಾಷಣದುದ್ದಕ್ಕೂ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳನ್ನು ಕೊಂಡಾಡಿದರು. ಭಕ್ತರು ಮಾಡಿರುವ ತುಲಾಭಾರವನ್ನು ಗದ್ದುಗೆಯಲ್ಲಿರುವ ಫಕೀರೇಶ ಸ್ವೀಕರಿಸಿ ಭಕ್ತರನ್ನು ಹರಿಸಿದ್ದಾನೆ ಎಂದರು. ಯಾರೇ ಆಗಲಿ, ದ್ವೇಷದ ಭಾವನೆ ಇಟ್ಟು ಕೊಳ್ಳಬಾರದು. ದ್ವೇಶ ಮನೋಭಾವ ಇದ್ದವರು ಎಂದಿಗೂ ಸ್ವಾಮೀಜಿ ಆಗಲು ಸಾಧ್ಯವಿಲ್ಲ. ಭಕ್ತರಲ್ಲಿ ಪ್ರೀತಿ, ಸಮಾಜದ ಒಳಿತಿಗೆ ಮಿಡಿಯುವವರೇ ನಿಜವಾದ ಸ್ವಾಮೀಜಿ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿ.ಪ. ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವರಾದ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಶಾಸಕರಾದ ಅರವಿಂದ ಬೆಲ್ಲದ್, ಶ್ರೀನಿವಾಸ ಮಾನೆ, ಸಲೀಮ್ ಅಹ್ಮದ್, ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.