7 ರಿಂದ ಟೋಲ್ ಶುಲ್ಕ ಸಂಪೂರ್ಣ ಸ್ಥಗಿತ !
ಹುಬ್ಬಳ್ಳಿ : ಇನ್ನೂ ಎಷ್ಟು ವರ್ಷ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಪ್ರಯಾಣಿಕರು ಟೋಲ್ ಪಾವತಿಸಬೇಕಿ,… ಈ ಟೋಲ್ ಪಾವತಿ ಮಾಡಿ ಮಾಡಿಯೇ ಸಾಕಾಗಿದೆ. ಅವಧಿ ಮುಗಿದರೂ ಪುನಃ ಸರ್ಕಾರ ವಿಸ್ತರಣೆ ಮಾಡಿ ಟೋಲ್ ನಿರ್ವಹಣೆ ಗುತ್ತಿಗೆ ಪಡೆದ ಕಂಪನಿಗೆ ಅನುಕೂಲ ಮಾಡಿಕೊಡುತ್ತಿದೆ. ಜನರ ಜೇಬು ಖಾಲಿ ಮಾಡುವುದೇ ಸರ್ಕಾರದ ಉದ್ದೇಶವೇ?
ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಬಗೆಯ ಆಕ್ರೋಶದ ನುಡಿಗಳು ಬೈಪಾಸ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಂದ ಕೇಳಿ ಬರುತ್ತಲೆ ಇವೆ. ಡಬಲ್ ಲೈನ್ ಹೋಗಿ ಸಿಕ್ಸ್ ಲೈನ್ ಆಗುತ್ತಿದೆ. ಸಿಕ್ಸ್ ಲೈನ್ ಆದ ಮೇಲೆಯೇ ಈ ಡಬಲ್ ಲೈನ್ ಶುಲ್ಕ ಪಾವತಿ ಹೊರೆ ಇಳಿಯುತ್ತದೆಯೇ?ಎಂದೂ ಪ್ರಶ್ನಿಸುತ್ತಿದ್ದರು. ಹು-ಧಾ.
ಆದರೆ, ಇನ್ನು ಮುಂದೆ ಈ ಆಕ್ರೋಶ ನುಡಿಗಳು ಬೇಸರ ಇಲ್ಲ. ಕಾರಣ, ಹು-ಧಾ ಬೈಪಾಸ್ ರಸ್ತೆ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆ (ಟೋಲ್) ಗುತ್ತಿಗೆ ಪಡೆದಿದ್ದ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ತನ್ನ ಗುತ್ತಿಗೆ ಅವಧಿ ಮುಗಿದಿರುವುದರಿಂದ ಸೆ. 7 ರಿಂದ ಟೋಲ್ ಸಂಗ್ರಹ ಸ್ಥಗಿತಗೊಳಿಸಲಿದೆ !
ಬೈಪಾಸ್ ನಿರ್ವಹಣೆ ಮತ್ತು ಟೋಲ್ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಿದ್ದು, 1998ರಿಂದಲೂ ಈ ಬೈಪಾಸ್ ನಿರ್ವಹಣೆ ಮತ್ತು ಟೋಲ್ ಸಂಗ್ರಹಣೆ ಕಾರ್ಯ ನಿರ್ವಹಿಸಿದ್ದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ಪ್ರಕಟಿಸಿದೆ. ಈ ಕುರಿತು ಸುತ್ತೋಲೆಯನ್ನೇ ತನ್ನ ನೌಕರರಿಗೆ ಹೊರಡಿಸಿರುವ ಕಂಪನಿಯ ಕಾರ್ಯಕಾರಿ ನಿರ್ದೇಶಕ ಶಿವಕುಮಾರ ಖೇಣಿ, ಸೆ. 7 ರಿಂದ ರಸ್ತೆ ಬಳಕೆದಾರರ ಶುಲ್ಕ ಆಕರಣೆ ಕಾರ್ಯ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಕಂಪನಿಯ ಗುತ್ತಿಗೆ ಅವಧಿಯು ಮುಗಿದಿರುವುದರಿಂದ ಕಂಪನಿಯ ಆರ್ಥಿಕ ವ್ಯವಹಾರವೂ ಸ್ಥಗಿತಗೊಳ್ಳಲಿದೆ. ಹೀಗಾಗಿ, ಕಂಪನಿಯಡಿ ಕೆಲಸ ಮಾಡಿದ ನೌರರನ್ನು ಸೆ. 7 ರಿಂದ ಸೇವೆಯಿಂದ ಬಿಡುಗಡೆ ಮಾಡಲಾಗುವುದು. ತಮ್ಮೆಲ್ಲರ ಸಹಕಾರ, ಶ್ರಮದಿಂದ ಕಂಪನಿಯು ಗುತ್ತಿಗೆ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಿದೆ. ಇದಕ್ಕಾಗಿ ಕೃತಜ್ಞತೆಗಳು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.
ನಿರ್ಮಾಣ, ನಿರ್ವಹಣೆ ಮಾಡಿಕೊಂಡು ಬಂದಿದ್ದು ಹೇಗೆ?
ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ಸಂಸ್ಥೆಯು ಹು-ಧಾ ಬೈಪಾಸ್ ರಸ್ತೆ ನಿರ್ಮಾಣ, ನಿರ್ವಹಣೆ ಕುರಿತಂತೆ 1998ರ ಫೆಬ್ರುವರಿಯಲ್ಲಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಒಡಂಬಡಿಕೆಯ ಪ್ರಕಾರ ಗುತ್ತಿಗೆ ಅವಧಿಯು 2024ರ ಮೇ 5 ರಂದೇ ಮುಕ್ತಾಯವಾಗಿದೆ. ಆದರೆ, ಗುತ್ತಿಗೆ ಕಂಪನಿಗೆ ಆದಾಯದಲ್ಲಾದ ನಷ್ಟದ ಕಾರಣಗಳಿಂದಾಗಿ ಸರ್ಕಾರವು ಗುತ್ತಿಗೆ ಅವಧಿಯನ್ನು ಸೆ. 6 ರವರೆಗೆ ವಿಸ್ತರಿಸಿತ್ತು. ಹೀಗೆ ಗುತ್ತಿಗೆ ಅವಧಿಯನ್ನು ವಿಸರಣೆ ಮಾಡಿದ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಚೆಗೆ ಈ ವಿಧಾನನಲ್ಲಿ ಮಾನಕೊಚ್ಚ ಮವಾಗಿ ಹೆಸರಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದದವು ಈಗಡಲವೆಲ್ಲಕ್ಕೂ ತೆರೆ ಬಿದ್ದಿದ್ದೂ ಇನ್ನು ಮುಂದೆ ಬಂದರನ್ನು ನಿರಾಳವಾಗಿ ಪ್ರಯಾಣಿಕರು ಗಬ ಮುಂನ್ ಲ್ಲಿ ಬಳಿಕ ಮತ್ತೆ ಶುಲ್ಕ ಪಾವತಿ ಇದ್ದದ್ದೇ.