For the best experience, open
https://m.samyuktakarnataka.in
on your mobile browser.

76ನೇ ಕಲ್ಯಾಣ ಕರ್ನಾಟಕ ಉತ್ಸವ

05:11 PM Sep 17, 2023 IST | Samyukta Karnataka
76ನೇ ಕಲ್ಯಾಣ ಕರ್ನಾಟಕ ಉತ್ಸವ

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ವಿಮೋಚನೆಗಾಗಿ ನಡೆದ ಅವಿರತ ಹೋರಾಟದಲ್ಲಿ ಭಾಗಿಯಾದ ಮಹನೀಯರ ತ್ಯಾಗ, ಬಲಿದಾನವು ಸ್ಮರಣೀಯವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ನಡೆದ 76ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹೈದ್ರಾಬಾದ್ ಪ್ರಾಂತ್ಯದ ಜಿಲ್ಲೆಯ ಈ ವಿಮೋಚನಾ ಹೋರಾಟದಲ್ಲಿ ಈ ಭಾಗದ ಅನೇಕ ಮಹನೀಯರು ಹೋರಾಟ ಮಾಡಿ, ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ರಾಮಚಂದ್ರಪ್ಪ ವೀರಪ್ಪ, ವೀರಭದ್ರಪ್ಪ ಶಿರೂರ, ಶಿವಮೂರ್ತಿಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನಮೋಠೆ, ಬೇಳೂರ ತಿಮ್ಮನಗೌಡ, ಬಸವಂತರಾಯ ಕಾಟ್ರಳ್ಳಿ, ದಾನಸೂರ ಬಸರಿಗಿಡದ ವೀರಪ್ಪ, ಜನಾರ್ಧನರಾವ್ ದೇಸಾಯಿ, ಸಿ.ಎಂ. ಚುರ್ಚಿಹಾಳಮಠ, ಕೊಪ್ಪಳದ ಭೀಮನಗೌಡ ಕವಲೂರ, ಷಣ್ಮುಖಪ್ಪ ಯರಾಶಿ, ದೇವೇಂದ್ರಕುಮಾರ ಹಕಾರಿ, ಡಾ.ಪಂಚಾಕ್ಷರಿ ಹಿರೇಮಠ ಸೇರಿದಂತೆ ಈ ಭಾಗದಇನ್ನು ಅನೇಕರು ಭಾಗಿಯಾದರು ಎಂದು ಇತಿಹಾಸದ ಘಟನೆಗಳನ್ನು ಮೆಲಕು ಹಾಕಿದರು.