For the best experience, open
https://m.samyuktakarnataka.in
on your mobile browser.

8000 ರನ್​ಗಳ ದಾಖಲೆ ಬರೆದ ವಿರಾಟ್

02:23 AM May 23, 2024 IST | Samyukta Karnataka
8000 ರನ್​ಗಳ ದಾಖಲೆ ಬರೆದ ವಿರಾಟ್

ಅಹಮದಾಬಾದ್​: ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿ 8000 ರನ್​ಗಳನ್ನು ಗಳಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಇಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 29 ರನ್​ ಬಾರಿಸುವ ಮೂಲಕ  ಈ ಮೈಲುಗಲ್ಲು ತಲುಪಿದ್ದಾರೆ. 252 ಪಂದ್ಯಗಳಲ್ಲಿ  38.69 ರ  ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್​​ನಲ್ಲಿ ರನ್​ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ.