For the best experience, open
https://m.samyuktakarnataka.in
on your mobile browser.

Damage controlಗಾಗಿ ಅಧಿಕಾರಿ ಅಮಾನತ್ತು

11:56 AM Sep 03, 2024 IST | Samyukta Karnataka
damage controlಗಾಗಿ ಅಧಿಕಾರಿ ಅಮಾನತ್ತು

ಬೆಂಗಳೂರು: ಕಾನೂನನ್ನು ಪೂರ್ವಾನ್ವಯವಾಗಿ ಉಪಯೋಗಿಸಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ವಾಳ್ ಹೇಳೀದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಉಚ್ಚ ನ್ಯಾಯಾಲಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ತೆಗೆದುಕೊಂಡಿರುವ ತಡೆಯಾಜ್ಞೆ ತೆರವು ಆಗುತ್ತೆ ಎಂದು ಗೊತ್ತಾದ ಕೂಡಲೇ damage control ಗಾಗಿ ಅಧಿಕಾರಿಯೊಬ್ಬರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಕಾನೂನನ್ನು retrospective ಎಫೆಕ್ಟ್ (ಪೂರ್ವಾನ್ವಯವಾಗಿ) ಉಪಯೋಗಿಸಲು ಸಾಧ್ಯವಿಲ್ಲ. ಇದು prospective effect ಇಂದ ಮಾತ್ರ ಸಾಧ್ಯ. ಅಂದರೆ, 1997 ರಲ್ಲಿ ಭೂಸ್ವಾಧೀನ ಪಡಿಸಿಕೊಂಡ ಭೂಮಿಯನ್ನು 2015 ರಲ್ಲಿ 50:50 ಅನುಪಾತದಲ್ಲಿ ಕೊಡಲು ಹೇಗೆ ಸಾಧ್ಯ? ಇದರ ಬಗ್ಗೆ ನಾನು ಎರಡು ತಿಂಗಳ ಹಿಂದೆಯೇ ಪ್ರಶ್ನಿಸಿದ್ದೆ. ಆದರೆ, ಸರ್ಕಾರಕ್ಕೆ ಈಗ ಇದರ ಅರಿವಾಗಿದೆ. ಅದು, ಮಾನ್ಯ ಮುಖ್ಯ ಮಂತ್ರಿಗಳು ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣದ ತೆರವು ಆಗಲಿದೆ ಎಂದು ಗೊತ್ತಾದಾಗ, ಈ ರೀತಿಯಾದ ಕ್ರಮ. ಸಿಂಘ್ವಿ ಅವರ 'ಮನೆಪಾಠ' ದಂತೆ ಮುಖ್ಯ ಮಂತ್ರಿಗಳು ವರ್ತಿಸುತ್ತಿದ್ದಾರೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ.